ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಿತಿಗೆ ಬಿಕಿನಿ ಭಯ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬಾಲಿವುಡ್‌ನಲ್ಲಿ ಬಿಕಿನಿ ತೊಡುವವರ ಸಂಖ್ಯೆ ಹೆಚ್ಚುತ್ತಿದೆ. ನಟಿಯರು ಯಾವ ಅಂಜಿಕೆಯೂ ಇಲ್ಲದೆ ಬಿಕಿನಿ ತೊಟ್ಟು ಅಭಿಮಾನಿಗಳನ್ನು ರಂಜಿಸುತ್ತಿರುವ ಕಾಲ ಇದು.  ಆದರೆ ತಮ್ಮ ಬಿಂದಾಸ್‌ ನಟನೆಯಿಂದಲೇ ಜನಪ್ರಿಯತೆ ಗಳಿಸಿರುವ ಪರಿಣಿತಿ ಚೋಪ್ರಗೆ  ಬಿಕಿನಿ ಮತ್ತು ಸ್ವಿಮ್‌ ಸೂಟ್‌  ತೊಡಲು ಹಿಂಜರಿಕೆಯಂತೆ. 

‘ನಟಿಯಾದವಳು ಬಿಕಿನಿ ತೊಟ್ಟರೆ ತಪ್ಪೇನು ಇಲ್ಲ. ಪಾತ್ರಕ್ಕೆ ಅಗತ್ಯವಿದ್ದಾಗ ಎಂತಹ ಉಡುಪನ್ನು ಧರಿಸಲು ತಯಾರಿರಬೇಕಾಗುತ್ತದೆ. ಆದರೆ ನನ್ನ ದೇಹಸಿರಿ ಬಿಕಿನಿಗೆ ಹೊಂದಿಕೆಯಾಗುತ್ತದೆ ಎಂದು ಅನಿಸುತ್ತಿಲ್ಲ.  ಅಂತಹ ಬಟ್ಟೆಗಳನ್ನು ತೊಡಲು ನನ್ನ ಮೈಸಿರಿಯನ್ನು ಇನ್ನಷ್ಟು ಹುರಿಗೊಳಿಸುವ ಅಗತ್ಯವಿದೆ’ ಎನ್ನುವುದು ಪರಿಣಿತಿ ಅನಿಸಿಕೆ.

ಚಿತ್ರರಂಗ ಪ್ರವೇಶಿಸುವಾಗ ದಪ್ಪಗಿದ್ದ ಪರಿಣಿತಿ ನಂತರ ಸಾಕಷ್ಟು  ಕಸರತ್ತು ನಡೆಸಿ ತೂಕ ಇಳಿಸಿಕೊಂಡಿದ್ದಾರೆ. ‘ನಾನು ಮೊದಲಿನಷ್ಟು ದಪ್ಪಗಿಲ್ಲ ನಿಜ, ಆದರೆ ಬಿಕಿನಿ ತೊಡುವಷ್ಟು ಸಪೂರ ಆಗಿಲ್ಲ. ಅದಕ್ಕಿನ್ನೂ ಸಮಯವಿದೆ. ಮುಂದೊಂದು ದಿನ ಬಿಕಿನಿ ಧರಿಸುತ್ತೇನೆ’ ಎಂಬ ಭರವಸೆಯನ್ನು ನೀಡುತ್ತಾರೆ.

ಬಿಕಿನಿ ತೊಡಲು ದೇಹವನ್ನು ಇನ್ನಷ್ಟು ಹುರಿಗೊಳಿಸುವ ಅಗತ್ಯವಿದೆ.   ನಮಗೆ ಹೊಂದಿಕೆಯಾಗುವ ಉಡುಗೆಯನ್ನು ತೊಟ್ಟಾಗ ಮಾತ್ರವೇ ಸುಂದರವಾಗಿ ಕಾಣಲು ಸಾಧ್ಯ ಎಂಬ ನಂಬಿಕೆ ಇವರದು.

ಇನ್ನೂ ಫ್ಯಾಷನ್‌ ಬಗ್ಗೆ ನನಗೆ ಎಳ್ಳಷ್ಟು ಜ್ಞಾನ ಇಲ್ಲ ಎನ್ನುವ ಈಕೆಗೆ ಅನುಷ್ಕಾ ಮತ್ತು ಕಂಗನಾ ಅವರ ಸ್ಟೈಲ್‌ ಇಷ್ಟವಂತೆ. “ಫ್ಯಾಷನ್‌ ಎಂದರೆ ಏನು ಎಂಬುದು ಇಂದಿಗೂ ಅರ್ಥವಾಗಿಲ್ಲ.  ಈ ವಿಷಯದಲ್ಲಿ ನಾನು ಸಾಕಷ್ಟು ಕಲಿಯುವ ಅಗತ್ಯವಿದೆ. ಆದರೆ ನನದೊಂದು ಸಲಹೆ,  ಯಾರೋ ಚೆಂದದ ಉಡುಗೆ ತೊಟ್ಟಿದ್ದಾರೆ ಎಂಬ ಕಾರಣಕ್ಕೆ ನೀವು ಅವರ ಶೈಲಿಯನ್ನು ಅನುಕರಿಸಬೇಡಿ. ನಿಮ್ಮ ದೇಹಕ್ಕೆ ಹೊಂದಿಕೆಯಾಗುವಂತಹ ಉಡುಗೆ ತೊಡಿ’ ಎನ್ನುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT