ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಜ್ಞಾನ ಕಮ್ಮಟ

Last Updated 24 ಏಪ್ರಿಲ್ 2015, 20:22 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ  ಮೂರು ದಿನಗಳ  ‘ಪರಿಸರ ಜ್ಞಾನ ಸಂವಹನ’ ಕಮ್ಮಟ ಹಮ್ಮಿಕೊಂಡಿದೆ.

ಮೇ 28, 29 ಮತ್ತು 30ರಂದು  ಕಮ್ಮಟ ನಡೆಯಲಿದ್ದು ಆಸಕ್ತರಿಂದ  ಅರ್ಜಿ ಆಹ್ವಾನಿಸಲಾಗಿದೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ವಸತಿ ವ್ಯವಸ್ಥೆಯನ್ನು ಅಕಾಡೆಮಿ ಕಲ್ಪಿಸಲಿದೆ.

20 ರಿಂದ 40 ವರ್ಷ ವಯಸ್ಸಿನ, ಪರಿಸರದ ಬಗ್ಗೆ ಅಧ್ಯಯನ ನಡೆಸಿರುವವರು ಅರ್ಜಿ ಸಲ್ಲಿಸಬಹುದು.      ಶಿಬಿರಾರ್ಥಿಗಳು ಮೂರು ದಿನ ಅಲ್ಲೇ ವಾಸ್ತವ್ಯ ಹೂಡುವುದು ಕಡ್ಡಾಯ.

ಅರ್ಜಿ ಸಲ್ಲಿಸಲು ಏಪ್ರಿಲ್‌ 30 ಕಡೇ ದಿನ. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಮೇ 9 ಒಳಗಾಗಿ ಅಕಾಡೆಮಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ವಿಳಾಸ: ನಾಗೇಶ ಹೆಗಡೆ, ಪರಿಸರ ಕಮ್ಮಟದ ನಿರ್ದೇಶಕ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು–560002. ವಿವರಗಳಿಗೆ ದೂರವಾಣಿ ಸಂಖ್ಯೆ 080–22211730, 22106460 ಸಂಪರ್ಕಿಸಬಹುದು. ಇಲ್ಲವೇ, ಅಕಾಡೆಮಿ ವೆಬ್‌ಸೈಟ್‌ಗೆ http://karnatakasahithyaacademy.org/  ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT