ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತದಿಂದ ಬಿದ್ದು ಪಕ್ಷಿ ವಿಜ್ಞಾನಿ ಸಾವು

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಐಎಎನ್‌ಎಸ್‌):  ತಮಿ­ಳುನಾಡಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಸಂಸ್ಥೆಯ ಪಕ್ಷಿ ವಿಜ್ಞಾನಿ ಎಸ್‌. ಭೂಪತಿ (52) ಅವರು  ಕೇರಳದ ನೆಯ್ಯಾರ್‌ ವನ್ಯಮೃಗ ಧಾಮದಲ್ಲಿಯ ಅಗಸ್ತ್ಯ­ಕುಂಡ ಪರ್ವತದ ತುತ್ತತುದಿಯಿಂದ ಕಾಲು ಜಾರಿಬಿದ್ದು ಅಸುನೀಗಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು 1,868 ಮೀಟರ್‌ ಎತ್ತರದ ಪ್ರದೇಶದಲ್ಲಿ ಸಂಚ­ರಿ­ಸುತ್ತ ಸಂಶೋಧನಾ ಕಾರ್ಯ ನಡೆ­ಸು­ತ್ತಿದ್ದಾಗ ಭೂಪತಿ ಅವರು ಮಾರ್ಗ­ದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ ಸೋಮವಾರ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೂಪತಿ ಅವರು ದಟ್ಟವಾದ ಬಿದಿರು ಪೊದೆಗಳ ಮೇಲೆ ಬಿದ್ದಿದ್ದರಿಂದ ಅವರ ಎಡಗಣ್ಣು ಹರಿದುಹೋಗಿದೆ. ವಿದ್ಯಾ­ರ್ಥಿ­­ಗಳು ಮತ್ತು ಸ್ಥಳೀಯರು ಅವರ ಮೃತ ದೇಹವನ್ನು ಸುಮಾರು 30 ಕಿ. ಮೀ. ದೂರ ಹೊತ್ತುಕೊಂಡು ವಾಹನ ಸಂಚ­ರಿಸುವ ರಸ್ತೆಗೆ ತಂದಿದ್ದಾರೆ. ನಂತರ ದೇಹ­ವನ್ನು ತಿರುವನಂತಪುರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಾಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT