ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ವತಾರೋಹಿ ಬಾಬು ಶವ ಸೋಮವಾರ ತವರಿಗೆ

Last Updated 18 ಏಪ್ರಿಲ್ 2015, 13:47 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಅರ್ಜೆಂಟೀನಾ ಮತ್ತು ಚಿಲಿ ದೇಶಗಳ ನಡುವಣ ಎತ್ತರದ ಪರ್ವತಗಳಲ್ಲಿ ಕಳೆದ ತಿಂಗಳು (ಮಾ. 24) ಪರ್ವತಾರೋಹಣದ ವೇಳೆ ಸಾವನ್ನಪ್ಪಿದ್ದ ಭಾರತದ ಖ್ಯಾತ ಪರ್ವತಾರೋಹಿ ಮಲ್ಲಿ ಮಸ್ತಾನ್‌ ಬಾಬು (40) ಅವರ ಮೃತದೇಹವು ಏಪ್ರಿಲ್ 20ರಂದು ಸ್ವಗ್ರಾಮವನ್ನು ತಲುಪುವ ಸಾಧ್ಯತೆಗಳಿವೆ.

ಬಾಬು ಅವರ ಮೃತದೇಹವು ಭಾನುವಾರ ರಾತ್ರಿ ಅಥವಾ ಸೋಮವಾರ ಚೆನ್ನೈ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆಗಳಿವೆ ಎಂದು ಆಂಧ್ರ ಪ್ರದೇಶ ವಾರ್ತಾ ಸಚಿವ ಪಿ.ರಘುನಾಥ್ ರೆಡ್ಡಿ ಅವರು ಶನಿವಾರ ತಿಳಿಸಿದ್ದಾರೆ.

ಅವರ ದೇಹವನ್ನು ಚೆನ್ನೈನಿಂದ ನೆಲ್ಲೊರ್‌ ಜಿಲ್ಲೆಯ ಗಾಂಧಿ ಜನ ಸಂಗಮ ಗ್ರಾಮಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಾಬು ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ನೆಲ್ಲೊರ್ ಜಿಲ್ಲಾಧಿಕಾರಿಗೆ ಸರ್ಕಾರ ಸೂಚಿಸಿದೆ ಎಂದೂ ಅವರು ಹೇಳಿದ್ದಾರೆ.

ವಿಶ್ವ ಏಳು ಪರ್ವತಗಳನ್ನು ಏರಿದ್ದ ದಾಖಲೆ ಹೊಂದಿದ್ದ ಬಾಬು ಅವರು ಅರ್ಜೆಂಟೀನಾದಲ್ಲಿ ಪರ್ವತ ಏರುವಾಗ ಕಾಣೆಯಾಗಿದ್ದರು‌.ಬಳಿಕ ಅವರ ಮೃತದೇಹ ಮೇರು ಶಿಖರಗಳ ನಡುವೆ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT