ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್‌ಮೈರಾ: ಉಗ್ರರಿಂದ 17 ಜನರ ಹತ್ಯೆ

ಮುಂದುವರಿದ ಐ.ಎಸ್‌ ಆಕ್ರಮಣ: ಇನ್ನಷ್ಟು ಪ್ರದೇಶ ವಶ
Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಡಮಾಸ್ಕಸ್‌ (ಐಎಎನ್‌ಎಸ್‌): ಪ್ರಾಚೀನ ನಗರ ಪಲ್‌ಮೈರಾವನ್ನು ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರರು ಗುರುವಾರ ನಿಯಂತ್ರಣಕ್ಕೆ ಪಡೆದ ಬಳಿಕ ಕನಿಷ್ಠ 17 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ಸಂಘಟನೆ ಹೇಳಿದೆ.
ಹತ್ಯೆಗೊಳಗಾದವರಲ್ಲಿ ಸಿರಿಯಾ ಸರ್ಕಾರದ ಬೆಂಬಲಿಗರು  ಮತ್ತು ಯೋಧರು ಸೇರಿದ್ದಾರೆ.

ಪಲ್‌ಮೈರಾದಲ್ಲಿ ಭಾರಿ ಪ್ರಮಾಣದ ಅನಾಚಾರದಲ್ಲಿ ಉಗ್ರರು ತೊಡಗಿದ್ದಾರೆ. ಹತ್ಯೆಯಾದವರಲ್ಲಿ ಹಲವರ ಶಿರಚ್ಛೇದ ಮಾಡಲಾಗಿದೆ.
ವಾಯುನೆಲೆ, ಕೇಂದ್ರ ಕಾರಾಗೃಹ ಮತ್ತು ಗುಪ್ತಚರ ಕೇಂದ್ರ ಕಚೇರಿ ಗಳೆಲ್ಲವೂ ಉಗ್ರರ ವಶವಾಗಿವೆ ಎಂದು ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ಇನ್ನಷ್ಟು ಪ್ರದೇಶ ಐ.ಎಸ್‌ ವಶ: ಸಿರಿಯಾದ ಪ್ರಾಚೀನ ನಗರ ಪಲ್‌ಮೈರಾ ವನ್ನು ಗುರುವಾರ ವಶಕ್ಕೆ ಪಡೆದಿರುವ ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರರು ತಮ್ಮ ಆಕ್ರಮಣವನ್ನು ಮುಂದುವರಿಸಿದ್ದಾರೆ.

ಡಮಾಸ್ಕಸ್‌ ಮತ್ತು ಬಾಗ್ದಾದ್‌ ಹೆದ್ದಾರಿಯಲ್ಲಿ ಸಿರಿಯಾ-ಇರಾಕ್‌ ಗಡಿ ಪ್ರದೇಶವೊಂದನ್ನು ಉಗ್ರರು ವಶಕ್ಕೆ ಪಡೆದಿದ್ದಾರೆ. ಇದು ಈ ಭಾಗದಲ್ಲಿ ಸಿರಿಯಾ ಸರ್ಕಾರದ ನಿಯಂತ್ರಣದಲ್ಲಿದ್ದ ಏಕೈಕ ಗಡಿ ಪ್ರದೇಶವಾಗಿದೆ.

ಉಗ್ರರು ನಗರಗಳನ್ನು ವಶಕ್ಕೆ ಪಡೆದ ಬಳಿಕ ಎರಡೂ ದೇಶಗಳ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಪರಾರಿಯಾಗಿದ್ದಾರೆ.

ಐ.ಎಸ್‌ ಉಗ್ರರ ಮುನ್ನಡೆಯಿಂದಾಗಿ ಅಮೆರಿಕ ನೇತೃತ್ವದ ವಾಯುದಾಳಿ ಕಾರ್ಯತಂತ್ರಕ್ಕೆ ಹಿನ್ನಡೆಯಾಗಿದೆ ಎಂಬ ವಾದವನ್ನು ಅಧ್ಯಕ್ಷ ಬರಾಕ್‌ ಒಬಾಮ ತಳ್ಳಿ ಹಾಕಿದ್ದಾರೆ. ಅಮೆರಿಕ ಸೋಲುವ ಸ್ಥಿತಿಯಲ್ಲಿದೆ ಎಂಬುದನ್ನು ಅವರು ಒಪ್ಪಿಕೊಂಡಿಲ್ಲ.

ಆದರೆ, ಉಗ್ರರು ಪಲ್‌ಮೈರಾ ನಗರವನ್ನು ಧ್ವಂಸಗೊಳಿಸುವುದನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ಒಂದಾಗಬೇಕು ಎಂದು ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಹಾಲನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT