ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಹಣಿ ವಿತರಣೆಯಲ್ಲಿ ತಾರತಮ್ಯ: ಆಕ್ರೋಶ

Last Updated 1 ನವೆಂಬರ್ 2014, 11:26 IST
ಅಕ್ಷರ ಗಾತ್ರ

ದೇವನಹಳ್ಳಿ: ಪಹಣಿ ವಿತರಣೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ತಾರತಮ್ಯ ಮಾಡುತ್ತಿದ್ದಾರೆ   ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳು ಅಕ್ರೋಶ ವ್ಯಕ್ತ ಪಡಿಸಿದೆ.

ಮಿನಿ ವಿಧಾನಸೌಧ ಆವರಣದ ಪಹಣಿ ವಿತರಣಾ ಕೇಂದ್ರ ಬಳಿ ಮಾತನಾಡಿದ ಕರ್ನಾಟಕ ದಲಿತ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಹರಳೂರು ದೇವರಾಜ್, ತಾಲ್ಲೂಕು  ಕೇಂದ್ರದಲ್ಲಿ ಇತರೆ ಇಲಾಖೆಯ ಜತೆಗೆ ಕಂದಾಯ ಕೆಲಸ ಕಾರ್ಯಗಳಿಗೆ ಗ್ರಾಮಾಂತರ ಪ್ರದೇಶದಿಂದ ಅನೇಕ ರೈತರು ಬರುತ್ತಾರೆ. ಅದರಲ್ಲಿ ಪಹಣಿ ಪಡೆಯುವುದು ಒಂದಾಗಿದೆ. ಆದರೆ ಪಹಣಿ ನೀಡುವ ಸಿಬ್ಬಂದಿಗಳು ಭೂ ಮಾಫಿಯಾ ಜತೆ ಶಾಮೀಲಾಗಿದ್ದಾರೆ. ಅಲ್ಲದೆ ಪಹಣಿ ಕಚೇರಿಯ ಒಳಗೆ ಹೋಗಲು ಅವರಿಗೆ ಮುಕ್ತ ಅವಕಾಶ­ವಿದೆ. ಆದರೆ, ರೈತರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸರದಿ ಸಾಲಿನಲ್ಲಿ  ಕಾದು ಬಳಲಿದರೂ ಕೇಳುವರೇ ಇಲ್ಲ­ದಂ­ತಾಗಿದೆ ಎಂದು ಆಕ್ರೋಶ ವ್ಯಕ್ತಪ­ಡಿಸಿದರು. ಗಣಕಯಂತ್ರ ನಿರ್ವಾಹಕರು ಸಮ­­ರ್ಪಕ ನಿರ್ವಹಣೆ ಮಾಡದ ಪರಿ­ಣಾಮ ಸತ್ತವರು ದಾಖಲಾತಿ­ಯಲ್ಲಿ ಬದುಕಿರು­ತ್ತಾರೆ.

ಬದುಕಿದವರು ಮರ­ಣ ಹೊಂದಿ­ರುತ್ತಾರೆ. ತಂಗಿ ಹೆಸರು ಅಕ್ಕ­ನಿಗೆ, ತಂದೆ ಹೆಸರು ದೊಡ್ಡಪ್ಪನಿಗೆ ಬದ­ಲಾವಣೆ­ಯಾ­ದರೆ ತಿದ್ದುಪಡಿಗಾಗಿ ಎಷ್ಟು ಬಾರಿ ಅಲೆಯಬೇಕು. ಕಚೇರಿ ಬಳಿಗೆ ಹೋದರೆ ಆಚೆ ಹೋಗಿ ಎಂದು ಗದರಿಸುತ್ತಾರೆ. ಇಲ್ಲಿ ಹೇಳೋರು ಕೇ ­ಳೋ­ರು ಯಾರೂ ಇಲ್ಲ ಎಂದರು. ರೈತರಿಗೆ ಪಹಣಿ ಅಮೂಲ್ಯ ದಾಖಲೆ­ಯಾಗಿದೆ. ಸಕಾಲದಲ್ಲಿ ಪಹಣಿ ಸಿಗದೆ ಕೆಲ ಪ್ರಕ­ರಣಗಳಲ್ಲಿ ಜಾಮೀನು ಸಿಗದೇ ಸೆರೆ­ವಾಸ ಅನುಭಸುತ್ತಿರುವ ಅನೇಕ ಉದಾ­ಹರಣೆಗಳಿವೆ, ಭೂಮಾಫಿ­ಯಾ­ಗಳಿಗೆ, ವಿವಿಧ ಪಕ್ಷಗಳ ಮುಖಂ­ಡರಿಗೆ, ಪಹಣಿ ನೀಡಿಕೆಯಲ್ಲಿ ಗಂಟೆಗ­ಟ್ಟಲೇ ವೈಯಕ್ತಿಕ ಕಾಳಜಿ ವಹಿಸುತ್ತಿ­ರುವುದು ಎಷ್ಟು ಸರಿ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT