ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ಕುಂಭದ್ರೋಣ ಮಳೆ: 26 ಬಲಿ

Last Updated 27 ಏಪ್ರಿಲ್ 2015, 10:07 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌(ಪಿಟಿಐ): ಪಾಕಿಸ್ತಾನದ ಖೈಬರ್‌ ಪ್ರಾಂತ್ಯದಲ್ಲಿ ಸೋಮವಾರ ಸುರಿದ ಕುಂಭದ್ರೋಣ ಮಳೆ 26 ಮಂದಿಯನ್ನು ಬಲಿಪಡೆದಿದೆ. ಮಳೆ ಹೊಡೆತಕ್ಕೆ ಸಿಲುಕಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೇಶಾವರ, ಚಾರ್‌ಸಡ್ಡಾ, ನೌಶೆರಾ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ.  ಕೆಲವು ವಾಹಿನಿಗಳು ಮಳೆಯಿಂದ ಸುಮಾರು 35 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿವೆ. ಆದರೆ ಅಧಿಕಾರಿಗಳು ಈ ವರದಿಯನ್ನು ದೃಢಪಡಿಸಿಲ್ಲ.

ಪೇಶಾವರ, ವಾಹಿದ್‌ ಘಾರಿ, ಚರಾಸಡ್ಡಾ ರಸ್ತೆ, ಲಿಯಾಖತ್‌ ಅಬಾದ್‌, ಸಾಧಿಕ್‌ ಅಬಾದ್‌ಗಳಲ್ಲಿ ಬಿರುಗಾಳಿಗೆ ಹಲವು ಮನೆಗಳು ನೆಲಕಚ್ಚಿವೆ. ಗಾಯಾಳುಗಳನ್ನು ಪೇಶಾವರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಪ್ರಧಾನಿ ನವಾಜ್‌ ಷರೀಫ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಳೆ ಹಾನಿ ಸಂಭವಿಸಿದ ಜಿಲ್ಲೆಗಳಲ್ಲಿ ಚುರುಕಾಗಿ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ  ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT