ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲೂ ಲಘು ಭೂಕಂಪ

Last Updated 28 ಏಪ್ರಿಲ್ 2015, 8:56 IST
ಅಕ್ಷರ ಗಾತ್ರ

ಪೇಶಾವರ (ಪಿಟಿಐ): ನೇಪಾಳ ಭೂಕಂಪದ ಆಘಾತದಿಂದ ಜನರು ಹೊರಬರುವ ಮುನ್ನವೇ, ನೆರೆಯ ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದೆ.  ವಾಯುವ್ಯ ಪಾಕಿಸ್ತಾನದ ವಾಯುವ್ಯ ಭಾಗದ ಖೈಬರ್‌ ಮತ್ತು  ಪಕ್ತುನ್‌ಕಾವ ಪ್ರಾಂತ್ಯಗಳಲ್ಲಿ ಮಂಗಳವಾರ ಲಘು ಭೂಕಂಪನ ಆಗಿದೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 5.5 ರಷ್ಟಿತ್ತು.  ತಜಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಹಿಂದುಕುಶ್‌  ಪರ್ತವ ಶ್ರೇಣಿಯಲ್ಲಿ 144 ಕಿ.ಮೀ ನೆಲದಾಳದಲ್ಲಿ ಭೂಕಂಪನ ಕೇಂದ್ರ ಬಿಂದು  ಗುರುತಿಸಲಾಗಿದೆ.

ಭೂಕಂಪನದ ಅನುಭವ ಆಗುತ್ತಿದ್ದಂತೆ ಜನರು ಭಯಗೊಂಡು ಮನೆಗಳಿಂದ ಹೊರಗೋಡಿ ಬಂದರು. ಆದರೆ, ಯಾವುದೇ ಸಾವು ನೋವು ವರದಿಯಾಗಿಲ್ಲ. ಮಲಾಕಂದ್‌, ಸ್ವಾತ್‌ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ ಎಂದು  ಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ.

2005ರಲ್ಲಿ ಪಾಕ್‌ನ ಬಲೂಚಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 500 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT