ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಪೆಶಾವರ ದಾಳಿ ಬಳಿಕ 32 ಸಾವಿರ ಬಂಧನ

Last Updated 28 ಮಾರ್ಚ್ 2015, 13:45 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): 28 ಸಾವಿರಕ್ಕೂ ಅಧಿಕ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ವಿವಿಧ ಆರೋಪಗಳಡಿ 32 ಸಾವಿರಕ್ಕೂ ಅಧಿಕ ಜನರನ್ನು ಪಾಕಿಸ್ತಾನ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಶನಿವಾರ ಸರ್ಕಾರ ತಿಳಿಸಿದೆ.

2014ರ ಡಿಸೆಂಬರ್ 16ರಂದು ಪೆಶಾವರ ಸೇನಾ ಶಾಲೆ ಮೇಲಿನ ದಾಳಿ ನಂತರ ರಾಷ್ಟ್ರೀಯ ಕ್ರಿಯಾ ಯೋಜನೆ ಅನುಷ್ಠಾನಗೊಂಡ ಬಳಿಕ ನಡೆದ ಬಂಧನ ಎಂಬುದು ವಿಶೇಷ.

ದೇಶದಾದ್ಯಂತ ನಡೆದ 28,826 ಉಗ್ರ ವಿರೋಧಿ ಕಾರ್ಯಾಚರಣೆಗಳಡಿ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ 32,347 ಜನರನ್ನು ಬಂಧಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.

ಪಂಜಾಬ್‌ನಲ್ಲಿ 14,791, ಸಿಂಧ್ ಪ್ರಾಂತ್ಯದಲ್ಲಿ 5,517, ಖೈಬರ್ ಫಖ್ತುಂಖ್ವಾದಲ್ಲಿ 6,461, ಬಲೂಚಿಸ್ತಾನದಲ್ಲಿ 84, ಇಸ್ಲಾಮಾಬಾದ್‌ನಲ್ಲಿ 405, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 1,394, ಗಿಲ್ಜಿತ್–ಬಲ್ತಿಸ್ಥಾನದಲ್ಲಿ 83 ಹಾಗೂ ಸಂಯುಕ್ತ ಆಡಳಿತದ ಬುಡಕಟ್ಟು ಪ್ರದೇಶದಲ್ಲಿ 91 ಕಾರ್ಯಾಚರಣೆಗಳನ್ನು ಭದ್ರತಾ ಸಂಸ್ತೆಗಳು ನಡೆಸಿವೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ.

2014, ಡಿಸೆಂಬರ್‌ 24ರಿಂದ 2015 ಮಾರ್ಚ್‌ 25ರ ವರೆಗಿನ ಮಾಹಿತಿ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಈ ಅವಧಿಯಲ್ಲಿ 37 ಉಗ್ರರನ್ನು ಹತ್ಯೆ ಮಾಡಲಾಗಿದೆ. ಬಂಧಿತರಲ್ಲಿ 727 ಉಗ್ರರೂ ಸೇರಿದ್ದಾರೆ. ಇದೇ ಅವಧಿಯಲ್ಲಿ 62 ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.

ಇದೇ ಅವಧಿಯಲ್ಲಿ ಗುಪ್ತಚರ ವರದಿ ಆಧರಿಸಿ 2,237 ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT