ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಕಲಿಯದ ಪುರಾತನ ಪಕ್ಷ!

Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹೈಕಮಾಂಡ್‌ ಸಂಸ್ಕೃತಿಯ, ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಯ  ‘ಸೋನಿಯಾ, ರಾಹುಲ್‌’ ಎಂಬ ಒಂದೂ­ವರೆ ನಾಯಕತ್ವದ ಕಾಂಗ್ರೆಸ್‌, ಲೋಕಸಭೆ, ವಿಧಾನ­ಸಭೆ­ಗಳ ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಅನು­ಭವಿ­ಸುತ್ತ ಇದೀಗ ದೆಹಲಿ ಚುನಾವಣೆಯಲ್ಲಿ ‘ಶೂನ್ಯ­ಸಂಪಾದನೆ’ ಮಾಡಿದ್ದಾಯ್ತು.

ಆದರೂ ಅದರ ರಾಷ್ಟ್ರ, ರಾಜ್ಯ ಮಟ್ಟದ ನೇತಾ­ರರು ಆತ್ಮಾವಲೋಕನ, ಗಂಭೀರ ಸ್ವವಿಮರ್ಶೆ ಮಾಡಿ­ಕೊಳ್ಳದೆ, ಪಾಠ ಕಲಿಯದೆ ಪ್ರಧಾನಿ ನರೇಂದ್ರ ಮೋದಿ ಬಗೆಗೆ ನಂಜು­ಕಾರುತ್ತ ಸೋನಿಯಾ ಸ್ತುತಿ­ಯಲ್ಲಿ, ರಾಹುಲ್‌ ಭಟ್ಟಂಗಿ­ತನದಲ್ಲಿ ಕಾಲಹರಣ ಮಾಡುತ್ತಾ, ಆ ಪಕ್ಷ­ವನ್ನು ಇತಿಹಾಸದ ಕಸದ ಬುಟ್ಟಿಗೆ ಸೇರಿ­ಸು­ತ್ತಿ­ರುವುದೇ ಒಂದು ದುರಂತ ಸೇವೆ. ಸರಳತೆ, ವಿಶ್ವಾಸಾರ್ಹತೆ ಮೈಗೂ­ಡಿಸಿಕೊಂಡು ಕೆಲಸ ಮಾಡಿದರೆ ಕಾಂಗ್ರೆಸ್‌ಗೆ ಭವಿಷ್ಯ ಉಂಟು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT