ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಾಚಾರಿ ರಸ್ತೆ ತೆರವುಗೊಳಿಸಿ

ಕುಂದುಕೊರತೆ
Last Updated 19 ಜನವರಿ 2015, 19:30 IST
ಅಕ್ಷರ ಗಾತ್ರ

ನಗರದಲ್ಲಿ ಪಾದಚಾರಿ ರಸ್ತೆಯನ್ನು ಬಳಸಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ತೆರವುಗೊಳಿಸಿ ಎಂದು ಬಿಬಿಎಂಪಿಗೆ ನ್ಯಾಯಾಲಯ ಆದೇಶ ನೀಡಿದೆ. ಮುಖ್ಯಮಂತ್ರಿಯವರ ಗೃಹ ಕಚೇರಿಯಿಂದ ಶಿವಾನಂದ ಸರ್ಕಲ್‌ ರಸ್ತೆಯಲ್ಲಿ ಗಾಂಧಿಭವನದ ಎದುರು ರಸ್ತೆಯಲ್ಲಿ (ಭಾರತ್‌ ಸೇವಾದಳ ಸಮೀಪ) ಪಾದಚಾರಿ ರಸ್ತೆಯನ್ನೇ ಬಳಸಿ ಒಂದು ವಾಸದ ಮನೆಗೆ ಎರಡು ರಸ್ತೆ ಹಾಗೂ ಒಂದು ವಾಣಿಜ್ಯ ಕಟ್ಟಡಕ್ಕೆ ಒಂದು ರಸ್ತೆಯನ್ನು ಮಾಡಿಕೊಂಡಿದ್ದಾರೆ. ಈ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸುವಾಗ ಮೂರೂ ಸ್ಥಳಗಳಲ್ಲಿ ಪಾದಚಾರಿ ರಸ್ತೆ ಬಿಟ್ಟು ವಿಪರೀತ ವಾಹನಗಳು ಓಡಾಡುವ ರಸ್ತೆಗೆ ಇಳಿಯಲೇಬೇಕು. ಇದು ಯಾವೊಬ್ಬ ನಗರಪಾಲಿಕೆ ಅಧಿಕಾರಿಗೂ ಕಂಡಿಲ್ಲವೇ? ಪಾದಚಾರಿ ರಸ್ತೆ ನವೀಕರಣ ಮಾಡುವಾಗಲೂ ಈ ಅಕ್ರಮವನ್ನು ನೋಡಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT