ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ ಹೆಚ್ಚಳದಿಂದ ದೇವಸ್ಥಾನ ಆದಾಯ ಏರಿಕೆ: ನಾಯ್ಡು

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ವಿಜಯವಾಡ (ಪಿಟಿಐ): ಆಂಧ್ರ ಪ್ರದೇಶದ ದೇವಾಲಯಗಳ ಆದಾಯ ಶೇಕಡ 27 ರಷ್ಟು ಹೆಚ್ಚಿದೆ ಎಂದು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹೇಳಿದ್ದು, ‘ಜನರು ಹೆಚ್ಚು ಹೆಚ್ಚು ಪಾಪ ಮಾಡುತ್ತಿರುವುದು ಮತ್ತು ಅವರ ಸಂಕಷ್ಟ ಹೆಚ್ಚಿದ್ದೇ ಇದಕ್ಕೆ ಕಾರಣ’ ಎಂದಿದ್ದಾರೆ.

‘ಹೆಚ್ಚೆಚ್ಚು ಪಾಪಕೃತ್ಯ ಎಸಗುವವರು ಮತ್ತು  ಭಾರಿ ಸಂಕಷ್ಟದಲ್ಲಿ  ಸಿಲುಕಿದವರು ದೇವಸ್ಥಾನಕ್ಕೆ ಕಾಣಿಕೆ ನೀಡಿ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ’ ಎಂದು ಬುಧವಾರ ಇಲ್ಲಿ ಆರಂಭವಾದ ಜಿಲ್ಲಾಧಿಕಾರಿಗಳ ಸಮಾವೇಶದಲ್ಲಿ ತಿಳಿಸಿದ್ದಾರೆ.

‘ಜನರು ಮಾನಸಿಕ ನೆಮ್ಮದಿ ಪಡೆಯಲು ದೇವಾಲಯ ಮಾತ್ರವಲ್ಲದೆ, ಚರ್ಚ್‌ ಮತ್ತು ಮಸೀದಿಗಳಿಗೂ ಭೇಟಿ ನೀಡುತ್ತಾರೆ. ದೇವಾಲಯ, ಚರ್ಚ್‌ ಹಾಗೂ ಮಸೀದಿಗಳು ಇಲ್ಲದೇ ಇದ್ದಲ್ಲಿ ಎಷ್ಟೋ ಜನರು ಹುಚ್ಚರಾಗಿ ಬಿಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT