ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಚುನಾವಣೆ: ಸಿ.ಎಂ–ಶಾಸಕರ ಸಭೆ

Last Updated 17 ಏಪ್ರಿಲ್ 2015, 20:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಚುನಾವಣೆ, ವಿಭಜನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ನಗರದ ಕಾಂಗ್ರೆಸ್‌  ಶಾಸಕರು, ವಿಧಾನ­ಪರಿಷತ್‌ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಶುಕ್ರವಾರ ರಾತ್ರಿ ಖಾಸಗಿ ಹೋಟೆಲ್‌­ನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಹಾಗೂ ‌ನಗರವನ್ನು ಪ್ರತಿ­ನಿಧಿಸುವ ಸಚಿವರೂ  ಭಾಗವಹಿಸಿದ್ದರು.

‘ಬಿಬಿಎಂಪಿ ಚುನಾವಣೆಗೆ ಸಂಬಂಧ ಹೈಕೋರ್ಟ್‌ ಏನು ತೀರ್ಪು ನೀಡು­ತ್ತದೋ ತಿಳಿಯದು. ಹಾಗಾಗಿ ಚುನಾವಣೆ ಎದುರಿಸಲು ಸಜ್ಜಾಗಿ. ಅರ್ಹ ಅಭ್ಯರ್ಥಿಗಳ ಆಯ್ಕೆಯತ್ತ ಗಮನ ನೀಡಿ’ ಎಂದು ಸಿದ್ದರಾಮಯ್ಯ ಮುಖಂಡರಿಗೆ ಸಲಹೆ ನೀಡಿದರು ಎಂದು ಗೊತ್ತಾಗಿದೆ. ಆದರೆ, ಈ ಸಲಹೆಗೆ ಹೆಚ್ಚಿನ ಶಾಸಕರು ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.

ಚುನಾವಣೆ ನಡೆಯಲೇಬಾರದು. ಡಿ.ಕೆ ರವಿ ಸಾವು ಸೇರಿ­ದಂತೆ ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ಜನರ ಅಸಮಾ­ಧಾ­ನ ಫಲಿತಾಂಶದ ಮೇಲೆ ಪರಿಣಾಮ ಬೀರ­ಬಹುದು ಎಂಬ ಆತಂಕ­ವನ್ನು   ಕೆಲವರು ವ್ಯಕ್ತಪಡಿಸಿದರು ಎನ್ನಲಾಗಿದೆ. ಮುಖಂ­ಡರ ವಾದಕ್ಕೆ ಸಿ.ಎಂ ಕೂಡ ಸಹಮತ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

‘ಚುನಾವಣೆ ನನಗೂ ಬೇಡ. ಆದರೆ, ಪ್ರಕರಣ ಕೋರ್ಟ್‌ನಲ್ಲಿದೆ. ನ್ಯಾಯಾಲಯ ಏನು ಅಭಿಪ್ರಾಯ ಪಡುತ್ತದೋ ಗೊತ್ತಿಲ್ಲ.  ಒಂದು ವೇಳೆ ಚುನಾವಣೆ ನಡೆ­­ಸುವ ಅನಿವಾರ್ಯ ಪರಿಸ್ಥಿತಿ ಎದು­ರಾ­­ದರೆ ಸ್ಪರ್ಧಿಸಲೇ ಬೇಕಾಗುತ್ತದೆ.  ಹಾಗಾಗಿ ಚುನಾವಣೆಗೆ ಸಿದ್ಧರಾಗುವುದು ಉತ್ತಮ’ ಎಂದು ಸಿ.ಎಂ  ಅಭಿ­ಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ಚುನಾವಣಾ ಆಯೋಗಕ್ಕೆ ಮನವಿ: ಚುನಾವಣೆಗೆ ಅಧಿಸೂಚನೆ ಹೊರಡಿ­ಸ­ದಂತೆ ಸೋಮವಾರ (ಏ.20) ಸರ್ಕಾರದ ವತಿಯಿಂದ ಆಯೋಗಕ್ಕೆ ಮನವಿ ಸಲ್ಲಿ­ಸುವ ಬಗ್ಗೆ ಸಭೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT