ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್‌ ಮೇಳ: 4700 ಮಂದಿ ಭಾಗಿ

ಸುದ್ದಿ 2 ನಿಮಿಷ
Last Updated 30 ಮಾರ್ಚ್ 2015, 20:43 IST
ಅಕ್ಷರ ಗಾತ್ರ

ಬೆಂಗಳೂರು: ಪಾಸ್‌ಪೋರ್ಟ್‌ ಅರ್ಜಿ­ಗಳ ತ್ವರಿತ ವಿಲೇವಾರಿ ಮಾಡುವ ಉದ್ದೇಶದಿಂದ ಪ್ರಾದೇಶಿಕ ಪಾಸ್‌­­ಪೋರ್ಟ್‌ ಕಚೇರಿಯು ವಾರಾಂತ್ಯದಲ್ಲಿ ವಿವಿಧೆಡೆ ಆಯೋಜಿಸಿದ್ದ ‘ಜಂಬೂ ಪಾಸ್‌ಪೋರ್ಟ್‌ ಮೇಳ’ದಲ್ಲಿ 4700 ಮಂದಿ ಭಾಗವಹಿಸಿ ಸೇವೆ ಬಳಸಿಕೊಂಡಿದ್ದಾರೆ.

ನಗರದ ಲಾಲ್‌ಬಾಗ್‌, ಸಾಯಿ ಆರ್ಕೆಡ್‌ ಮಾತ್ರವಲ್ಲದೆ ಮಂಗ­ಳೂರು, ಹುಬ್ಬಳ್ಳಿಯ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿಯೂ ಮೇಳ ನಡೆಯಿತು.

‘ಪಾಸ್‌ಪೋರ್ಟ್‌ಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರಕ್ರಿಯೆ ಚುರುಕುಗೊಳಿಸಲು ಮೇಳ ಆಯೋಜಿಸಲಾಗಿತ್ತು. ಮೇಳದ ಭಾಗವಾಗಿ ಸಿಬ್ಬಂದಿ,  ಹೆಚ್ಚುವರಿಯಾಗಿ ಕೆಲಸ ಮಾಡಿದರು. ನಾಲ್ಕು ಕೇಂದ್ರಗಳಿಂದ ಸೇರಿ 4255 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದು, ಮೇಳ ಯಶಸ್ವಿಯಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ನಾಲ್ಕು ಕೇಂದ್ರಗಳಲ್ಲಿ ಈ ವರ್ಷ ಆಯೋಜಿಸಿರುವ ಮೇಳಗಳಿಂದ 18 ಸಾವಿರಕ್ಕೂ ಹೆಚ್ಚು ಅರ್ಜಿದಾರರಿಗೆ ಉಪಯೋಗವಾಗಿದೆ. ಅರ್ಜಿದಾರರು ತಮ್ಮ ಅರ್ಜಿಯ ಪ್ರಗತಿ ಮಾಹಿತಿ­ಯನ್ನು  www.passportindia.gov.inn ಮೂಲಕ ತಿಳಿಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT