ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎನ್‌ಜಿ: ಮೂಲಸೌಕರ್ಯ ಕಲ್ಪಿಸಲು ಭಾರತದ ನೆರವು

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪೋರ್ಟ್‌ ಮೊರ್ಸೆಬಿ (ಪಿಟಿಐ): ಪೆಸಿಫಿಕ್‌ ಪ್ರದೇಶದ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ   (ಪಿಎನ್‌ಜಿ) ಮೂಲಸೌಕರ್ಯಗಳನ್ನು ಕಲ್ಪಿಸಲು ಸುಮಾರು ₹670 ಕೋಟಿ ನೆರವು ನೀಡುವುದಾಗಿ ಭಾರತ ತಿಳಿಸಿದೆ.

ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಈ ಕ್ರಮಕ್ಕೆ ಮುಂದಾಗಿದ್ದು, ಪಿಎನ್‌ಜಿ ಹೊಂದಿರುವ ಅಪಾರ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ.

ಪಿಎನ್‌ಜಿಗೆ ಭೇಟಿ ನೀಡಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಾಗೂ  ಅಲ್ಲಿನ ಅಧ್ಯಕ್ಷ ಸರ್‌ ಮೈಕಲ್‌ ಓಗಿಯೊ ಅವರ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಈ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ.

ಭಯೋತ್ಪಾದನೆ ಸೇರಿದಂತೆ  ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಮಸ್ಯೆಗಳು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವುದು ಮತ್ತು ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸುವ ಕುರಿತು ರಾಷ್ಟ್ರಪತಿ ಸಮಾಲೋಚನೆ ನಡೆಸಿದರು ಎಂದು ಉಭಯ ದೇಶಗಳ ಜಂಟಿ ಹೇಳಿಕೆ ತಿಳಿಸಿದೆ.

ಇದೇ ಸಂದರ್ಭದಲ್ಲಿ ಭಾರತೀಯ ಪ್ರವಾಸಿಗರಿಗೆ ವೀಸಾ ಸೌಲಭ್ಯ ಕಲ್ಪಿಸುವುದಾಗಿ ಪಿಎನ್‌ಜಿ ಪ್ರಕಟಿಸಿದೆ. ಒಂದು ವರ್ಷ ಕಾಲ ಪಿಎನ್‌ಜಿಯಲ್ಲಿನ 20 ಸಾವಿರ ಎಚ್‌ಐವಿ ರೋಗಿಗಳಿಗೆ ಔಷಧ ಹಾಗೂ ವಿವಿಧ ಉಪಕರಣಗಳನ್ನು ನೀಡುವುದಾಗಿ ಭಾರತ ತಿಳಿಸಿದೆ.

ಎರಡೂ ದೇಶಗಳ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಕೃಷಿ ಸಂಶೋಧನೆ ಸಹಕಾರ ಕುರಿತು ಲೇ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಭಾರತೀಯ  ಕೃಷಿ ಸಂಶೋಧನಾ ಪರಿಷತ್‌ ನಡುವೆ ಕೈಗೊಂಡ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT