ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸಿ ಮುಖ್ಯಸ್ಥರಾಗಿ ಕೆ.ವಿ.ಥಾಮಸ್‌ ನೇಮಕ

Last Updated 20 ಆಗಸ್ಟ್ 2014, 12:45 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸಂಸತ್ತಿನ ಸಾರ್ವಜನಿಕ ಲೆಕ್ಕ ಸಮಿತಿಯ (ಪಿಎಸಿ) ಮುಖ್ಯಸ್ಥರಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ವಿ.ಥಾಮಸ್‌ ಅವರು ಬುಧವಾರ ನೇಮಕಗೊಂಡಿದ್ದಾರೆ.

‘ನಾವು ಒಂದು ತಂಡವಾಗಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮುಂದಿಡುವ ಪ್ರತಿಯೊಂದು ವಿಷಯಗಳನ್ನು ಪರೀಕ್ಷಿಸುತ್ತೇವೆ’ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ಥಾಮಸ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗರಿಷ್ಠ 22 ಸದಸ್ಯರ ಪಿಎಸಿಯನ್ನು ಪ್ರತಿವರ್ಷ ರಚಿಸಲಾಗುತ್ತದೆ. ಅದರಲ್ಲಿ ಲೋಕಸಭೆಯ 15 ಹಾಗೂ  ರಾಜ್ಯಸಭೆಯ ಏಳು ಸದಸ್ಯರು ಇರುವುದು ನಿಯಮ.

ಮಹಾಲೆಕ್ಕ ಪರಿಶೋಧಕರು (ಸಿಎಜಿ) ಸಂಸತ್ತಿನಲ್ಲಿ ಮಂಡಿಸುವ ವರದಿಗಳನ್ನು  ಪರೀಕ್ಷಿಸುವ ಅಧಿಕಾರ ಪಿಎಸಿ ಹೊಂದಿರುತ್ತದೆ. ಸಾಮಾನ್ಯವಾಗಿ ಸಂಸತ್ತಿನ  ಪ್ರಮುಖ ವಿರೋಧ ಪಕ್ಷಕ್ಕೆ ಪಿಎಸಿ ಮುಖ್ಯಸ್ಥರ ಸ್ಥಾನ  ಒಲಿಯುತ್ತದೆ.

ಸಾರ್ವಜನಿಕ ಲೆಕ್ಕ ಸಮಿತಿಯು ಮುಂದಿನ ವಾರ ತನ್ನ ಮೊದಲ ಸಭೆ ನಡೆಸಲಿದೆ. ಕಳೆದ ಲೋಕಸಭೆಯಲ್ಲಿ ಮುರಳಿ ಮನೋಹರ್ ಜೋಷಿ ಅವರು ಸಾರ್ವಜನಿಕ ಲೆಕ್ಕ ಸಮಿತಿ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT