ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಡೆ!

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘10ರಲ್ಲಿ 6 ಭಾರತೀಯರು ಪತ್ನೀ ಪೀಡಕರು’ (ಪ್ರ.ವಾ., ನ.11). ಪತ್ನಿ­ಯರು ಪತಿಗಳನ್ನು ಪೀಡಿಸು­ತ್ತಾರೊ ಪತಿಗಳು ಪತ್ನಿಯರನ್ನು ಪೀಡಿಸು­ತ್ತಾರೊ ಎಂಬುದು ಅಪ್ರಕೃತ; ‘ಇದ­ಮಿತ್ಥಂ’ ಎಂಬ ನಿರ್ಣಯ ಅಶಕ್ಯವೂ ಹೌದು!

ಆದರೆ ಇದೊಂದು ಪುಟಾಣಿ ಕತೆ: ಒಬ್ಬ ರಾಜನನ್ನು ಪುರೋ­ಹಿತ ‘ತ್ರಿ­ಪೀಡಾಸ್ತು’ (ನಿನಗೆ ಮೂರು ಪೀಡೆ­ಗಳಾಗಲಿ) ಎಂದು ಹರಸಿದ­ನಂತೆ. ಸಹಜ­ವಾಗಿಯೆ ರಾಜನಿಗೆ ಕೋಪ ಬಂತು. ಆದರೆ ಮುಂದಿನ ವಿವರಣೆ­ಯನ್ನು ಕೇಳಿದ ಮೇಲೆ ಅವನು ಪ್ರಸನ್ನ­ನಾಗಿ ಪುರೋಹಿ­ತ­­ನಿಗೆ ಮೆಚ್ಚುಗಾಣಿಕೆ ಕೊಟ್ಟ­ನಂತೆ: ‘ಒಂದು ಕಡೆ (ಹಾಸಿಗೆ­ಯಲ್ಲಿ) ನಿನ್ನ ಪತ್ನಿ (ಯರು) ನಿನ್ನನ್ನು ಪೀಡಿಸಲಿ; ಇನ್ನೊಂದು ಕಡೆ ಮಕ್ಕಳು ಪೀಡಿಸಲಿ; ಮತ್ತೊಂದು ಕಡೆ ಯಾಚಕರು ಪೀಡಿಸಲಿ!’


ಒಂದಿಲ್ಲೊಂದು ಬಗೆಯ ‘ಪೀಡೆ’­ಯಿಲ್ಲದೆ ಬದುಕಿಲ್ಲ ಎನ್ನಬಹುದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT