ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟರಾಜರ ಜ್ಯೋತಿ ಯಾತ್ರೆ ಜನವರಿ 1ರಿಂದ

Last Updated 30 ಜನವರಿ 2015, 6:08 IST
ಅಕ್ಷರ ಗಾತ್ರ

ಹಾನಗಲ್‌:  ನಡೆದಾಡುವ ದೇವ ರೆಂದು ಪ್ರಸಿದ್ಧರಾಗಿರುವ ಪಂಂಡಿತ ಪುಟ್ಟ­ರಾಜರ ಜನ್ಮ ಶತಮಾನೋತ್ಸವ ಮತ್ತು ಪಂಡಿತ ಪಂಚಾಕ್ಷರಿ ಗವಾಯಿ­ಯವರ ನಾಟ್ಯ ಸಂಘದ 75ನೇ ವರ್ಷದ ವಜ್ರಮಹೋತ್ಸವದ ಅಂಗ­ವಾಗಿ ‘ಶ್ರೀಗುರು ಪುಟ್ಟ­ರಾ­ಜರ ಮಹಾ­ಜ್ಯೋತಿ’ ನಾಡಿನೆಲ್ಲೆಡೆ ಸಂಚರಿ ಸ­ಲಿದೆ ಎಂದು ಗದುಗಿನ ಶತಮಾನೋತ್ಸವ ಸಮಿ­ತಿಯ ಕಾರ್ಯಾಧ್ಯಕ್ಷ ನಿಂಗಪ್ಪ ಕೆಂಗಾರ ಹೇಳಿದರು.

ಹಾನಗಲ್‌ ಲಿಂಗೈಕ್ಯ ಕುಮಾರ ಶಿವ­ಯೋಗಿ­ಗಳಿಂದ ಪಂಡಿತ ಪಂಚಾಕ್ಷರಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಯವರ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಬ್ಬರೂ ಸಂಗೀತ ಲೋಕದ ದಿಗ್ಗಜ ಮುನಿಗಳು ಇದೇ ತಾಲ್ಲೂಕಿನವ­ರಾದ ಕಾರಣ ಪುಟ್ಟರಾಜರ ಮಹಾ­ಜ್ಯೋತಿಯು ಹಾನ­ಗಲ್‌ ಕುಮಾರ ಶಿವ­ಯೋಗಿಗಳ ವಿರಕ್ತಮಠ­ದಿಂದ ಹೊರ­ಡಲಿದೆ ಎಂದರು.

ಜನವರಿ 1ರಿಂದ ಆರಂಭವಾಗುವ ಯಾತ್ರೆ ಜೂನ್‌ 1ರಂದು ಗದುಗಿನ ಪುಣ್ಯಾಶ್ರಮ ತಲುಪು­ತ್ತದೆ. ಹಾವೇರಿ, ದಾವಣಗೆರೆ, ಬಳ್ಳಾರಿ, ರಾಯ­ಚೂರು, ವಿಜಯಪುರ, ಕೊಪ್ಪಳ, ಧಾರವಾಡ ಮತ್ತು ಗದಗ ಜಿಲ್ಲೆಗಳ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 6 ತಿಂಗಳುಗಳ ಕಾಲ  ಸಂಚರಿಸಲಿದೆ.

ಇಲ್ಲಿನ ವಿರಕ್ತಮಠದಲ್ಲಿ ಹಾನಗಲ್‌ ಕುಮಾರ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡುವರು. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಶಿವಾಚಾ­ರ್ಯರು, ಬಮ್ಮನಹಳ್ಳಿಯ ಶಿವಯೋಗೀ­ಶ್ವರ ಸ್ವಾಮೀಜಿ, ಅಡ್ನೂರ–ಗದಗ ದಾಸೋಹ ಮಠದ ಪಂಚಾಕ್ಷರ ಶಿವಾ­ಚಾ­ರ್ಯ, ಹೋತನಹಳ್ಳಿ ಶಂಭುಲಿಂಗ ಶಿವಾ­ಚಾರ್ಯ ಸ್ವಾಮೀಜಿ ಮತ್ತು ವೀರೇಶ್ವರ ಪುಣ್ಯಾ­ಶ್ರ­ಮದ ಕಲ್ಲಯ್ಯಜ್ಜ­ನವರು ಸಾನ್ನಿಧ್ಯ ವಹಿಸುವರು ಎಂದರು.

ಮಾಜಿ ಸಚಿವ ಸಿ.ಎಂ.ಉದಾಸಿ ಅಧ್ಯಕ್ಷತೆ ವಹಿಸು­ವರು. ಶತಮಾ ನೋತ್ಸವ ಸಮಿತಿ ಉಪಾಧ್ಯಕ್ಷ, ಸಂಸದ ಶಿವಕುಮಾರ ಉದಾಸಿ ಭಾಗವಹಿ ಸುವರು ಎಂದು ಕೆಂಗಾರ ತಿಳಿಸಿದರು. ಜೂನ್‌ 1ರಿಂದ ಗದುಗಿನಲ್ಲಿ ಒಂದು ವಾರ ನಾಡಿ­ನ ವಿವಿಧ ಮಠಾಧೀಶರು, ಸಂಗೀತ ವಿದ್ವಾಂಸರು, ಸಾಹಿತಿಗಳು, ರಂಗಕಲಾವಿದರನ್ನು ಒಳಗೊಂಡ ಧಾರ್ಮಿ­­ಕ ಕಾರ್ಯಕ್ರಮ ನಡೆಯ­ಲಿವೆ.

ಜೂನ್‌ 4ರಂದು 100 ಹಿರಿಯ ಕಲಾವಿ­ದರಿಗೆ ಸನ್ಮಾನ, 5ರಂದು 100 ಸಂಗೀತ ಕಲಾವಿದರಿಗೆ ಸನ್ಮಾನ  ಮತ್ತು ಪುಟ್ಟ­ರಾಜ ಗವಾಯಿಗಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಸಂಗೀತ ಕ್ಷೇತ್ರದಲ್ಲಿ ದೇಶದಲ್ಲಿ ಹೆಸರು ಗಳಿಸಿರುವ ಒಬ್ಬ ಕಲಾವಿದರಿಗೆ ₨ 2.50 ಲಕ್ಷ ನಗ­ದು ಪುರಸ್ಕಾರ ನೀಡುವ ಯೋಚನೆಯಿದೆ ಎಂದರು. ಸಮಿತಿಯ ಬಸವರಾಜ ಹಿಡಕಿಮಠ. ಪ್ರಕಾಶ ಬಸರಿಗಿಡದ, ಪಿ.ಸಿ.ಹಿರೇಮಠ,  ವಸಂತಗೌಡ ಪೊಲೀಸ್‌ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT