ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರನ ಆಡಳಿತ ಟೀಕಿಸಿದ ಮುಲಾಯಂ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಉತ್ತರ ಪ್ರದೇಶ­ದಲ್ಲಿ ಅಖಿಲೇಶ್‌ ಯಾದವ್‌ ನೇತೃ­ತ್ವದ ಸರ್ಕಾ­­ರವು ಅಭಿವೃದ್ಧಿ ಕಾರ್ಯಗಳನ್ನು ಜಾರಿ­­ಗೊಳಿ­ಸುವಲ್ಲಿ ಬಹಳ ನಿಧಾನಗತಿ ಅನು­ಸರಿ­­ಸು­ತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಟೀಕಿಸಿದ್ದಾರೆ.

‘ಕೇವಲ ಯೋಜನೆಗಳ ಶಂಕುಸ್ಥಾಪ­ನೆ­­­ಯನ್ನು ಮಾತ್ರ ನೋಡುತ್ತಿದ್ದೇವೆಯೇ ಹೊರತು ಅವುಗಳ ಉದ್ಘಾಟನೆಯನ್ನಲ್ಲ’ ಎಂದು ಅವರು ಭಾನುವಾರ ಇಲ್ಲಿ ತಮ್ಮ ಪುತ್ರನ ಆಡಳಿತ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ರಾಜ್ಯ ಸರ್ಕಾರ ಸಾಕಷ್ಟು ಯೋಜ­ನೆ­ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರೂ, ಇನ್ನೂ ಅವು­ಗಳನ್ನು ಉದ್ಘಾಟಿಸುವ ಅವ­­­ಕಾಶ ತಮಗೆ ಸಿಕ್ಕಿಲ್ಲ’ ಎಂದು ಅಖಿಲೇಶ್‌ ಸಮ್ಮುಖ­ದಲ್ಲೇ ದೂರಿದರು.

ನಕಲು ಮಾಡಿದ ಮೋದಿ
ಗ್ರಾಮಗಳನ್ನು ದತ್ತು ಪಡೆಯುವ ಮತ್ತು ಶೌಚಾಲಯಗಳನ್ನು ನಿರ್ಮಿಸುವ ತಮ್ಮ ಯೋಜನೆಗಳನ್ನು ಈಗ ಪ್ರಧಾನಿ ನರೇಂದ್ರ ಮೋದಿ ನಕಲು ಮಾಡಿದ್ದಾರೆ. ತಾವು 1990ರಲ್ಲೇ ಈ ಯೋಜ­ನೆ­ಗಳನ್ನು ಜಾರಿ­ಗೊಳಿ­ಸಿದ್ದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT