ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆಯ ಅಧಿಕಾರಿಗಳ ವರ್ತನೆಗೆ ಅಸಮಾಧಾನ

Last Updated 27 ಮೇ 2015, 4:56 IST
ಅಕ್ಷರ ಗಾತ್ರ

ಕುಂದಾಪುರ: ನಗರದ ರಸ್ತೆಗೆ ಹೊಂದಿ ಕೊಂಡಿರುವ ಕಟ್ಟಡಗಳಿಗೆ ಪಾರ್ಕಿಂಗ್‌ ಕಲ್ಪಿಸುವ ಹೆಸರಿನಲ್ಲಿ ಪುರಸಭೆಯ ಅಧಿ ಕಾರಿಗಳು ಸಾರ್ವಜನಿಕರಿಗೆ ಮುನ್ಸೂಚನೆ ನೀಡದೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಏಕ ಪಕ್ಷೀಯವಾಗಿ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಸರ್ವಾಧಿಕಾರಿ ಧೋರಣೆಯನ್ನು ತೋರು ತ್ತಿದೆ ಎಂದು ಕುಂದಾಪುರ ನಗರಾಭಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೇಕಬ್‌ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಯ ಯಾವುದೆ ಅಭಿವೃದ್ದಿ ಕಾರ್ಯಗಳಿಗೆ ಒತ್ತುವರಿಯಾದ ಜಾಗ ವನ್ನು ತೆರವುಗೊಳಿಸುವ ಮುಂಚೆ ಸಂಬಂಧಿತ ಒತ್ತುವರಿದಾರರಿಗೆ ನೋಟಿಸ್‌ ನೀಡಿ ಸಾಕಷ್ಟು ಕಾಲಾವಕಾಶ ವನ್ನು ನೀಡಿ, ಸಾರ್ವಜನಿಕರ ವಿಶ್ವಾಸ ವನ್ನು ಪಡೆದುಕೊಂಡು ಕಾರ್ಯಾಚರಣೆ ಮಾಡಬೇಕು. ಮಳೆಗಾಲ ಸಮೀಪಿಸುತ್ತಿ ರುವ ಈ ದಿನಗಳಲ್ಲಿ ಯಾವುದೆ ಪೂರ್ವ ಸೂಚನೆ ನೀಡದೆ ಏಕಾಏಕಿ ಕಾರ್ಯಾ ಚರಣೆ ನಡೆಸುತ್ತಿರುವುದರಿಂದಾಗಿ ಪೇಟೆಯ ಶೇ.60–70 ವ್ಯಾಪಾರಸ್ಥರಿಗೆ ತೊಂದರೆಗಳಾಗಿದೆ.

ಸಾರ್ವಜನಿಕರಿಗೆ ಆಗುತ್ತಿರುವ ಅನಾನೂಕೂಲತೆಗಳನ್ನು ಗಮನದಲ್ಲಿ ಇಟ್ಟು ಕೊಂಡು, ಒತ್ತುವರಿದಾರರಿಗೆ ಆಕ್ರಮ ತೆರವಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಪ್ರಸ್ತುತ ನಡೆಸುತ್ತಿರುವ ಕಾರ್ಯಾಚರಣೆಯನ್ನು ಕೂಡಲೆ ಸ್ಥಗಿತ ಗೊಳಿಸಬೇಕು, ಇಲ್ಲದೆ ಇದ್ದಲ್ಲಿ ಸಮಾನ ಮನಸ್ಕರೊಂದಿಗೆ ಅಧಿಕಾರಿಗಳ ವಿರುದ್ದ ಸಾರ್ವಜನಿಕ ಹೋರಾಟ ಸಂಘಟಿಸ ಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT