ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಭಾಗ್ಯ ಯಾವಾಗ?

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿಂದ ಹಲವು ಭಾಗ್ಯಗಳು ಬಾಗಿಲು  ಬಡಿಯುತ್ತ ರಾಜ್ಯದ ಜನಸಾಮಾನ್ಯರನ್ನು ತಲುಪಿವೆ. ಆದರೆ  ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರೋತ್ಸಾಹಿಸಲು ಈ ಹಿಂದೆ ಜಾರಿಯಲ್ಲಿದ್ದ ಪುಸ್ತಕ ಖರೀದಿಯನ್ನು ಕೈಬಿಟ್ಟದ್ದು ಏಕೆ? ಕನ್ನಡದ ಹೆಸರಲ್ಲಿ, ಧರ್ಮ, ಜಾತಿ ಹೆಸರಲ್ಲಿ  ಕಾರ್ಯಕ್ರಮ ನಡೆಸಲು ಕೋಟಿಗಟ್ಟಲೆ ಹಣ ವಿನಿಯೋಗಿಸುವ ಸರ್ಕಾರ, ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಮೀನ–ಮೇಷ ಎಣಿಸುತ್ತಿದೆ.

ಜನ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಆಗಬೇಕು. ರಾಜ್ಯಕ್ಕೆ ಮಠ, ಮಂದಿರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಗಳು ಬೇಕಿವೆ. ಎಲ್ಲ ವರ್ಗಗಳ ಜನ ಗ್ರಂಥಾಲಯಗಳಲ್ಲಿ ಒಂದಾಗುವಂತೆ ಮಾಡಬೇಕಿದೆ. ಹಾಗಾಗಿ ನಾಡಿನ ಜನರಿಗೆ ‘ಪುಸ್ತಕ ಭಾಗ್ಯ’ ಯೋಜನೆ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT