ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಂಡ ನರಸಿಂಗ್ ಯಾದವ್ ವಿಚಾರಣೆ

ಎರಡು ಮೂರು ದಿನಗಳಲ್ಲಿ ತೀರ್ಪು ಪ್ರಕಟ: ನಾಡಾ ಹೇಳಿಕೆ
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಸೋನೆಪತ್, ಹರಿಯಾಣ (ಪಿಟಿಐ):  ಕುಸ್ತಿಪಟು ನರಸಿಂಗ್ ಯಾದವ್ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕುರಿತ ನಿರ್ಧಾರವು ಗುರುವಾರ ಹೊರಬೀಳಲಿಲ್ಲ.

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ   ಯಾದವ್ ಪ್ರಕರಣದ ಕುರಿತ ವಿಚಾರಣೆಯನ್ನು  ಮುಕ್ತಾಯ ಗೊಳಿಸಿರುವ  ನಾಡಾ ಅಂತಿಮ  ತೀರ್ಮಾನವನ್ನು ಶನಿವಾರ ಅಥವಾ ಸೋಮವಾರ ಬಹಿರಂಗಪಡಿಸಲಿದೆ.

ರಿಯೊ ಒಲಿಂಪಿಕ್ಸ್‌ನ ಪುರುಷರ 74 ಕೆಜಿ ಫ್ರೀಸ್ಟ್ಯೈಲ್ ವಿಭಾಗದಲ್ಲಿ ಸ್ಪರ್ಧಿಸಲು  ನರಸಿಂಗ್ ಯಾದವ್ ಆಯ್ಕೆಯಾಗಿದ್ದರು. ಆದರೆ ಕಳೆದ ವಾರ ನಡೆಸಿದ ಎ ಮತ್ತು ಬಿ ಮಾದರಿ ಪರೀಕ್ಷೆಗಳಲ್ಲಿ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು.  ಬುಧವಾರ ಅವರು ತಮ್ಮ ಪರ ವಕೀಲರೊಂದಿಗೆ   ನಾಡಾದ ಎದುರು ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

‘ಇವತ್ತು (ಗುರುವಾರ) ಕೆಲವರ ವಿಚಾರಣೆ ನಡೆಸಲಾಯಿತು. ಇದ ರೊಂದಿಗೆ ನಾಡಾದ ತನಿಖೆ  ಸಂಪೂರ್ಣ ವಾಗಿದೆ.  ಶನಿವಾರ ಅಥವಾ ಸೋಮ ವಾರ ತೀರ್ಪು ನೀಡಲಾಗುವುದು’ ಎಂದು ನಾಡಾದ ವಕೀಲ ಗೌರಂಗ್ ಕಾಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಯಾದವ್ ಅವರಿಗೆ ಒಲಿಂಪಿಕ್ಸ್‌ ಪ್ರವೇಶದ ದ್ವಾರಗಳು ಮುಚ್ಚಿದಂತಾ ಗಿವೆ. ಅವರು ತಾವು ನಿರಪರಾಧಿ ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ನಿಷೇಧಿತ ಮದ್ದು ಅವರ ದೇಹ ಸೇರಿದ್ದು ಹೇಗೆ ಎಂಬುದನ್ನೂ ಅವರು ಸ್ಪಷ್ಟಪಡಿಸಿಲ್ಲ. ಬೇರೆ ಯಾರೋ ಹುನ್ನಾರ ಮಾಡಿರುವುದಾಗಿ ಅವರು ಹೇಳುತ್ತಿದ್ದಾರೆ.

ಆದರೆ ಅದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು  ಒದಗಿಸುತ್ತಿಲ್ಲ.  ಅವರ ನಿರ್ಲಕ್ಷ್ಯ ಮತ್ತು ವಾಡಾ ನಿಯಮದ ಉಲ್ಲಂಘನೆಯು ಸ್ಪಷ್ಟವಾಗಿದೆ. ಅವರಿಗೆ ಶಿಕ್ಷೆ ನೀಡಬೇಕೆಂದು ನಾವು ವಾದ ಮಂಡಿಸಿ ದ್ದೇವೆ’ ಎಂದು ಗೌರಂಗ್ ಹೇಳಿದ್ದಾರೆ. ತಾತ್ಕಾಲಿಕ ಅಮಾನತು ಎದುರಿಸುತ್ತಿರುವ ಯಾದವ್‌ ಬದಲಿಗೆ ಪ್ರವೀಣ್ ರಾಣಾ ಅವರನ್ನು ರಿಯೊಗೆ ಕಳಿಸಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ.

ನಾಡಾ ಹಸಿರು ನಿಶಾನೆಗೆ ಕಾಯುತ್ತಿದ್ದೇವೆ: ಐಒಎ
ನರಸಿಂಗ್ ತಪ್ಪಿತಸ್ಥ ಎಂದು ನಾಡಾ ಅಂತಿಮ ತೀರ್ಪು ನೀಡಿದರೆ  ಮಾತ್ರ ಪ್ರವೀಣ್ ರಾಣಾ ಅವರನ್ನು ರಿಯೊಗೆ ಕಳಿಸಲಾಗುವುದು ಎಂದು ಐಒಎ ತಿಳಿಸಿದೆ. ‘ಐಒಎ ಎಂದರೆ ಅಂಚೆ ಕಚೇರಿ ಇದ್ದಂತೆ.  ಅಗತ್ಯವಿರುವ ವ್ವವಸ್ಥೆಗಳನ್ನು ಮಾಡುವದಷ್ಟೇ ಕೆಲಸ.

ನರಸಿಂಗ್ ಯಾದವ್ ಅವರನ್ನು ತಾತ್ಕಾಲಿಕ ಅಮಾನತು ಮಾಡಿದಾಗ ರಾಣಾ ಅವರ ಹೆಸರನ್ನು ಸೂಚಿಸಲಾಗಿತ್ತು. ವಿಶ್ವ ಕುಸ್ತಿ ಫೆಡರೇಷನ್ ಅದನ್ನು ಅನುಮೋದಿ ಸಿತ್ತು’ ಎಂದು ಐಒಎ ಮುಖ್ಯ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

‘ಒಂದೊಮ್ಮೆ  ನಾಡಾ ನೀಡುವ ತೀರ್ಪು ನರಸಿಂಗ್ ಪರವಾಗಿ ಬಂದರೆ ಡಬ್ಲ್ಯುಎಫ್‌ಐ ತೆಗೆದುಕೊಳ್ಳುವ ನಿರ್ಧಾರದಂತೆ  ನಾವು ನಡೆದುಕೊಳ್ಳು ತ್ತೇವೆ. ನರಸಿಂಗ್ ಅವರನ್ನೇ ಕಳಿಸುವು ದಾದರೆ ನಮಗೆ ಅಭ್ಯಂತರವಿಲ್ಲ’ ಎಂದು ಮೆಹ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT