ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಸಿದ್ಧತೆ ಇರಲಿ

ಅಕ್ಷರ ಗಾತ್ರ

‘ಮುಂದಿನ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ, ಯುಕೆಜಿ ಆರಂಭಿಸಲು ಚಿಂತನೆ ನಡೆದಿದೆ’ ಎಂದು ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ (ಪ್ರ.ವಾ. ಜುಲೈ 27). ಇದೊಂದು ಉತ್ತಮ ನಿರ್ಧಾರ. ಆದರೆ, ಕೇವಲ ‘ಕೆಜಿ’ಗಳನ್ನು ಸರ್ಕಾರಿ ಶಾಲೆಗಳಲ್ಲಿ ಪರಿಚಯಿಸಿದ ಕೂಡಲೇ ಪೋಷಕರು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುತ್ತಾರೆಯೇ?

ನನ್ನ ಮೂರು ದಶಕಗಳ ಶಿಕ್ಷಕ ವೃತ್ತಿಯ ಅನುಭವವೇ ಈ ಪ್ರಶ್ನೆಗೆ ಕಾರಣ. 1988-89ರ ಆಸುಪಾಸಿನಲ್ಲಿ ತಿಪಟೂರಿನ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ, ಶಿಕ್ಷಕರೆಲ್ಲ ಸೇರಿ ಇಂಥದ್ದೇ ಒಂದು ಪ್ರಯೋಗ ಮಾಡಿದೆವು. ಖಾಸಗಿ ಶಾಲೆಯಲ್ಲಿರುವಂತೆ ನಮ್ಮ ಶಾಲೆಯ ಮಕ್ಕಳಿಗೂ ಬಣ್ಣದ ಸಮವಸ್ತ್ರ, ಟೈ, ಬ್ಯಾಡ್ಜ್, ಶೂ ಬಳಕೆ ಜಾರಿಗೆ ತಂದೆವು. ಗುಣಮಟ್ಟದ ಶಿಕ್ಷಣದ ಜೊತೆಗೆ, ಶಿಸ್ತುಬದ್ಧ ಕಲಿಕೆಗೂ ಒತ್ತು ನೀಡಿದೆವು. ಅದರಿಂದ ಹೊಸದಾಗಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ.

ಎಲ್‌ಕೆಜಿ, ಯುಕೆಜಿ ಆರಂಭಿಸಲು ಚಿಂತನೆ ನಡೆಸಿರುವ  ಸರ್ಕಾರ, ಮೊದಲು ಆ ಹಂತದಲ್ಲಿ ಶಿಕ್ಷಣ ನೀಡುವಂತಹ ಪರಿಣಾಮಕಾರಿ ಶಿಕ್ಷಕರನ್ನು ನೇಮಿಸಬೇಕು. ಈ ಕುರಿತು ಇನ್ನಷ್ಟು ಚಿಂತನೆ, ಪೂರ್ವಸಿದ್ಧತೆ  ಅಗತ್ಯ. ಇಲ್ಲದಿದ್ದರೆ ಮೇಲೆ ಹೇಳಿದಂತೆ ಭ್ರಮನಿರಸನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT