ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ, ಉತ್ತರ ವಲಯ ಮೇಲುಗೈ

ಅಂತರ ವಲಯ ಕ್ರಿಕೆಟ್‌: ಮಿಂಚಿದ ಋಷಭ್‌, ಅಶೋಕ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಡಿಮೆ ಮೊತ್ತ ಕಲೆ ಹಾಕಿದರೂ ಎದುರಾಳಿಗಳನ್ನು ನಿಯಂತ್ರಿಸಿ ತಂಡಕ್ಕೆ ಮುನ್ನಡೆ ತಂದುಕೊಡಲು ಅಶೋಕ ಸಂಧು ನೆರವಾದರು.

ಬ್ಯಾಟಿಂಗ್‌ನಲ್ಲಿ ಮಿಂಚಿದ ಋಷಭ್ ಡ್ರಾಲ್‌ ಬೌಲಿಂಗ್‌ನಲ್ಲೂ ಗಮನ ಸೆಳೆದರು. ಅಖಿಲ ಭಾರತ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಇವರಿಬ್ಬರ ಉತ್ತಮ ಆಟದ ನೆರವಿನಿಂದ ಉತ್ತರ ವಲಯ ಮೊದಲ ಇನಿಂಗ್ಸ್‌ ಮುನ್ನಡೆಯೊಂದಿಗೆ ಮೂರು ಪಾಯಿಂಟ್ ಕಲೆ ಹಾಕಿತು.

ಬೆಳಗಾವಿಯ ಕೆ.ಎಸ್‌.ಸಿ.ಎ ಮೈದಾನದಲ್ಲಿ ನಡೆದ ಎರಡು ದಿನಗಳ ಪಂದ್ಯದಲ್ಲಿ ಉತ್ತರ ವಲಯದ 208 ರನ್‌ಗಳ ಮೊದಲ ಇನಿಂಗ್ಸ್‌ ಮೊತ್ತಕ್ಕೆ ಉತ್ತರಿಸಿದ ದಕ್ಷಿಣ ವಲಯ 202 ರನ್‌ಗಳಿಗೆ ಆಲೌಟಾಗಿ ನಿರಾಸೆ ಅನುಭವಿಸಿತು.

ಹುಬ್ಬಳ್ಳಿ ರಾಜನಗರದ ಕೆ.ಎಸ್‌.ಸಿ.ಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಶ್ಚಿಮ ವಲಯವನ್ನು 105 ರನ್‌ಗಳಿಗೆ ಕಟ್ಟಿ ಹಾಕಿದ ಪೂರ್ವ ವಲಯ 7 ವಿಕೆಟ್‌ಗಳಿಗೆ 269 ರನ್‌ ಗಳಿಸಿ ಮೂರು ಪಾಯಿಂಟ್‌ ಬಗಲಿಗೆ ಹಾಕಿಕೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ‘ಬ್ಯಾಟಿಂಗ್‌ ಅಭ್ಯಾಸ’ ನಡೆಸಿ 2 ವಿಕೆಟ್‌ಗಳಿಗೆ 178 ರನ್‌ ಸೇರಿಸಿತು.

ಋಷಭ್‌–ಅಶೋಕ ಮಿಂಚು: ಬೆಳಗಾವಿಯಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಋಷಭ್ ಡ್ರಾಲ್‌ ಆಲ್‌ರೌಂಡ್ ಆಟ (73; 112 ಎಸೆತ, 1 ಸಿಕ್ಸರ್‌, 11 ಬೌಂಡರಿ/7ಕ್ಕೆ2 ವಿಕೆಟ್‌) ಪ್ರದರ್ಶಿಸಿದರು. 49 ರನ್‌ಗಳಿಗೆ 5 ವಿಕೆಟ್ ಉರುಳಿಸಿದ ಅಶೋಕ ಸಂಧು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು.

ಸಚಿನ್ ಪುತ್ರ ಮತ್ತೆ ಶೂನ್ಯ ಸಂಪಾದನೆ: ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಮತ್ತೆ ಶೂನ್ಯ ಸಂಪಾದನೆ ಮಾಡಿದರು. ಮೊದಲ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧದ ಎರಡೂ ಇನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾದ ಅವರು ಎರಡನೇ ಪಂದ್ಯದಲ್ಲಿ ಪೂರ್ವ ವಲಯ ವಿರುದ್ಧವೂ ಎಡವಿದರು.

ಮೊದಲ ಇನಿಂಗ್ಸ್‌ನಲ್ಲಿ 2 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದ ಅವರಿಗೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅವಕಾಶ ಸಿಗಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ತಂಡ 2 ವಿಕೆಟ್‌ಗೆ 178 ರನ್‌ ಗಳಿಸಲು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದಿವ್ಯಾಂಶು ಸಕ್ಷೇನಾ (71; 157 ಎಸೆತ, 8 ಬೌಂ) ಮತ್ತು ದೇವದತ್ತ ಪಾಟೀಲ (82; 148 ಎಸೆತ, 13 ಬೌಂ) ನೆರವಾದರು. ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಬಳಿಸಿದ್ದ ಅರ್ಜುನ್‌ ತೆಂಡೂಲ್ಕರ್‌ ಎರಡನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಿಕೆಟ್‌ ಪಡೆಯಲು ವಿಫಲರಾದರು.

ಸಂಕ್ಷಿಪ್ತ ಸ್ಕೋರ್‌: ಪಶ್ಚಿಮ ವಲಯ, ಮೊದಲ ಇನಿಂಗ್ಸ್‌:  47 ಓವರ್‌ಗಳಲ್ಲಿ 105ಕ್ಕೆ ಆಲೌಟ್‌ (ಸಂಪ್ರೀತ್‌ ಬಾಗಾ 32; ಶಾರೂಕ್‌ ಹುಸೇನ್‌ 18ಕ್ಕೆ2, ಆಕಾಶ ಸೇನ್‌ ಗುಪ್ತಾ 23ಕ್ಕೆ2, ಪಂಕಜ್‌ ಯಾದವ್‌ 10ಕ್ಕೆ2, ಅಪೂರ್ವ ಆನಂದ 9ಕ್ಕೆ2); ಪೂರ್ವ ವಲಯ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 269 (ಬಿಕ್ರಂ ದಾಸ್‌ 41, ಶ್ರೇಷ್ಠ ಸಾಗರ 37, ದೇವಜ್ಯೋತ್‌ ಘೋಷ್‌ 75, ಸಯಾನ್‌ ಕುಮಾರ್‌ 32; ಸಿದ್ಧಾರ್ಥ ದೇಸಾಯಿ 44ಕ್ಕೆ2, ಅಥರ್ವ ಅಂಕಲೇಕರ್‌ 54ಕ್ಕೆ2). ಪಶ್ಚಿಮ ವಲಯ, ಎರಡನೇ ಇನಿಂಗ್ಸ್‌: 59 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 178 (ದಿವ್ಯಾಂಶು ಸಕ್ಸೇನಾ 71, ವಾಸುದೇವ ಪಾಟೀಲ 82). ಉತ್ತರ ವಲಯ, ಮೊದಲ ಇನಿಂಗ್ಸ್‌: 48.2 ಓವರ್‌ಗಳಲ್ಲಿ 208ಕ್ಕೆ ಆಲೌಟ್‌ (ಪ್ರಭು ಸಿಮ್ರಾನ್‌ ಸಿಂಗ್‌ 42, ಋಷಭ್‌ ದಲಾಲ್‌ 73; ಅಜಯ ದೇವಗೌಡ 51ಕ್ಕೆ3, ಕಿಶನ್‌ ಕುಮಾರ್‌ 35ಕ್ಕೆ2, ಶುಭಾಂಗ ಹೆಗಡೆ 51ಕ್ಕೆ3); ದಕ್ಷಿಣ ವಲಯ, ಮೊದಲ ಇನಿಂಗ್ಸ್‌: 81.4 ಓವರ್‌ಗಳಲ್ಲಿ 202ಕ್ಕೆ ಆಲೌಟ್‌ (ರೋಹನ್‌ ರಾಯ್ಕರ್‌ 32, ವೈ.ಸಂದೀಪ 67; ಅಶೋಕ ಸಂಧು 49ಕ್ಕೆ5, ಋಷಭ್‌ ಡ್ರಾಲ್‌ 7ಕ್ಕೆ2). ಉತ್ತರ ವಲಯ, ಎರಡನೇ ಇನಿಂಗ್ಸ್‌: 23 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 106 (ಪ್ರಭು ಸಿಮ್ರಾನ್‌ ಸಿಂಗ್‌ 51, ಆಯುಷ್‌ ಬದೋನಿ 27).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT