ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ₨ 2.41 ಡೀಸೆಲ್‌ ₨2.25 ಇಳಿಕೆ

Last Updated 31 ಅಕ್ಟೋಬರ್ 2014, 19:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿ ಲೀಟರ್‌ಗೆ  ಪೆಟ್ರೋಲ್‌ ಬೆಲೆ ₨ 2.41 ಮತ್ತು ಡೀಸೆಲ್‌ ₨ 2.25 ಇಳಿಕೆ ಮಾಡ­ಲಾ­ಗಿದ್ದು, ಶುಕ್ರವಾರ ಮಧ್ಯ­ರಾತ್ರಿ­ಯಿಂದ ಹೊಸ ದರ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ತೈಲ ಬೆಲೆ ಇಳಿಕೆಯಾದ ಕಾರಣ ಪೆಟ್ರೋಲ್, ಡೀಸೆಲ್‌ ದರ ಕಡಿಮೆ ಮಾಡಲಾಗಿದೆ.  ಆಗಸ್ಟ್‌­ನಿಂದ ಆರನೇ ಬಾರಿ ದರ ಇಳಿಕೆಯಾಗಿದೆ.

ಡೀಸೆಲ್ ಬೆಲೆ ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಇಳಿಕೆಯಾಗಿದೆ.  ಆಗಸ್ಟ್‌ನಿಂದ ಪೆಟ್ರೋಲ್‌ ದರದಲ್ಲಿ ಒಟ್ಟಾರೆ ₨ 9.36 ಕಡಿಮೆ ಆದಂತಾ­ಗಿದೆ. ಸ್ಥಳೀಯ ಮಾರಾಟ ತೆರಿಗೆ ಮತ್ತು ವ್ಯಾಟ್‌ ಅನ್ವಯ ವಿವಿಧ ರಾಜ್ಯ­ಗಳಲ್ಲಿ ಇಂಧನ ಬೆಲೆ ಬೇರೆ ಬೇರೆಯಾಗಿರಲಿದೆ.

ಸಬ್ಸಿಡಿ ರಹಿತ 14.2 ಕೆ.ಜಿ.­ಸಿಲಿಂ­ಡರ್‌ ಅಡುಗೆ ಅನಿಲದ ಬೆಲೆಯಲ್ಲಿ  ₨18.5 ಇಳಿಕೆಯಾಗಿದೆ. ಈಗ ಸಿಲಿಂ­ಡರ್‌ ಬೆಲೆ ₨865 ಆಗಿದೆ. ಆಗಸ್ಟ್‌­ನಿಂದ ಸಬ್ಸಿಡಿ­ರಹಿತ ಅಡುಗೆ ಅನಿಲದ ದರ ನಾಲ್ಕನೇ ಬಾರಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT