ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ 91ಪೈಸೆ, ಡಿಸೇಲ್‌ 84ಪೈಸೆ ಇಳಿಕೆ

Last Updated 30 ನವೆಂಬರ್ 2014, 14:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) : ಪೆಟ್ರೋಲ್‌ ಹಾಗೂ ಡಿಸೇಲ್‌ನ ದರಗಳು  ಇಂದು ಕಡಿತವಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 91ಪೈಸೆ ಹಾಗೂ ಡಿಸೇಲ್‌ ಪ್ರತಿ ಲೀಟರ್‌ಗೆ 84ಪೈಸೆ ಇಳಿಕೆಯಾಗಿದೆ. ಪರಿಷ್ಕ್ರತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಪೆಟ್ರೋಲ್‌ ದರವು ಕಳೆದ ಆಗಸ್ಟ್‌ನಿಂದ ಇದು ಏಳನೇ ಬಾರಿಯ ಕಡಿತಗೊಂಡಿದೆ. ಡಿಸೇಲ್‌ನಲ್ಲಿ ಮೂರನೇ ಬಾರಿಯ ಇಳಿಕೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರದಲ್ಲಿ  ಕುಸಿತದ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

ಪೆಟ್ರೋಲ್‌ ಹಾಗೂ  ಡಿಸೇಲ್‌ ದರಗಳಲ್ಲಿ  ಇಳಿಕೆಯ ಬಗ್ಗೆ ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಹೇಳಿಕೆಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT