ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರರಿಗೆ ಶ್ರೇಷ್ಠತೆಯ ವ್ಯಸನ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೂಢನಂಬಿಕೆ ನಿಷೇಧ ಮಸೂದೆ ಜಾರಿಗಾಗಿ ಬೆಂಗಳೂರಿನಲ್ಲಿ ನಡೆಸಿದ ನಿರಶನದಲ್ಲಿ ರಾಜ್ಯದ ವಿವಿಧ ಜಾತಿ, ವರ್ಗಗಳ ಮಠಾಧೀಶರು
ಪಾಲ್ಗೊಂ­ಡಿ­ದ್ದರು. ಇವರೆಲ್ಲಾ ಬಸವ, ಬುದ್ಧ, ಅಂಬೇಡ್ಕರ್ ಅವರ ಸಮ ಸಮಾಜದ ನಿರ್ಮಾಣ­ದಲ್ಲಿ ನಂಬಿಕೆ ಉಳ್ಳ­ವರು. ಅಂಥವರನ್ನು ‘ಕಾವಿ ವೇಷಧಾರಿಗಳು’ ಎಂದು ಕರೆದಿರುವ ಪೇಜಾವರ ಶ್ರೀಗಳ ಮನಸ್ಸಿನಲ್ಲಿ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಇದ್ದಂತಿದೆ.

ನಿಡುಮಾಮಿಡಿ ಶ್ರೀಗಳಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿ­ದ್ದಾರೆ. ಹೌದು, ಅವರಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲಿ ನಂಬಿಕೆ ಇಲ್ಲ. ಬದಲು ಮಾನವ ಧರ್ಮ­ದಲ್ಲಿ ನಂಬಿಕೆ ಇದೆ. ಹಾಗಾಗಿ, ಅವರು ಪ್ರಗತಿ­ಪರ ಮಠಾಧೀಶರ ವೇದಿಕೆಯ ನೇತೃತ್ವ ವಹಿಸಿ ಮೂಢನಂಬಿಕೆ ನಿಷೇಧ ಮಸೂದೆಗೆ ಆಗ್ರಹಿಸಿ ನಿರ­ಶನ ನಡೆಸಿದ್ದಾರೆ.

ಆದರೆ, ಪೇಜಾವರ ಶ್ರೀಗಳಿಗೆ ಇಂಥ ಮಸೂದೆ ಬೇಕಾಗಿಲ್ಲ. ಬದಲಿಗೆ ಹಿಂದೂ ಧರ್ಮದ ಅನಿಷ್ಟ ಪದ್ಧತಿಗಳಲ್ಲೇ ನಂಬಿಕೆ ಇರು­ವಂತಿದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT