ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ವಶದಲ್ಲಿ ‘ಪ್ರೀತಿಯ ಚುಂಬಕ’ರು

ಕಾರ್ಯಕ್ರಮ ವಿರೋಧಿಸಿ ಶಿವಸೇನೆ, ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ
Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ನೈತಿಕ ಪೊಲೀಸ್‌­ಗಿರಿ ವಿರುದ್ಧ ‘ಪ್ರೀತಿಯ ಚುಂಬನ’ ಕಾರ್ಯ­ಕ್ರಮಕ್ಕೆ ಮರೀನ್‌ ಡ್ರೈವ್‌ ಮೈದಾನದತ್ತ ಮೆರವಣಿಗೆ ನಡೆ­ಸಲು ಸಿದ್ಧರಾಗಿದ್ದ ಸಂಘಟನಾ­ಕಾರ­ರನ್ನು ಮತ್ತು  ಅವರಿಗೆ ಬೆಂಬಲ ವ್ಯಕ್ತಪಡಿಸಿದ 50 ಜನರನ್ನು ಭಾನುವಾರ ವಶಕ್ಕೆ ತೆಗೆದು­ಕೊಳ್ಳ­ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಫ್ರೀ ಥಿಂಕರ್ಸ್‌’ ಹೆಸರಿನ ಸಂಘಟನೆ ಕಾರ್ಯಕ್ರಮ ಆಯೋಜಿ­ಸಿತ್ತು. ಸಂಘಟಕರು ಎರ್ನಾಕುಲಂ ಕಾನೂನು ಕಾಲೇಜಿನಿಂದ ಮರೀನ್‌ ಡ್ರೈವ್‌ ಮೈದಾನದವರೆಗೆ ಮೆರವ­ಣಿಗೆ ನಡೆ­ಸಲು ಯತ್ನಿಸಿದಾಗ ಅವರನ್ನು ತಡೆ­ಯ­ಲಾಯಿತು ಎಂದು ಅವರು ತಿಳಿಸಿದ್ದಾರೆ. ನೈತಿಕ ಪೊಲೀಸ್‌ಗಿರಿ ವಿರುದ್ಧ ಪ್ರತಿಭ­ಟನಾಕಾರರು ಭಿತ್ತಿಪತ್ರಗಳನ್ನು ಪ್ರದ­ರ್ಶಿಸಿ ಘೋಷಣೆಗಳನ್ನೂ ಕೂಗಿದರು.

ಈ ಕಾರ್ಯಕ್ರಮಕ್ಕೆ ಸಾವಿರ ಮಂದಿ ಪಾಲ್ಗೊಳ್ಳುವರು ಎಂದು ಸಂಘಟಕರು ನಿರೀಕ್ಷೆ ಮಾಡಿದ್ದರು. ಆದರೆ, ಕಾರ್ಯ­ಕ್ರಮದ ಕುರಿತು ಮಾಧ್ಯಮ­ಗಳು ಹೆಚ್ಚಿನ ಪ್ರಚಾರ ಮಾಡಿದ್ದರಿಂದ ಕುತೂಹಲ­ಗೊಂಡ ಜನರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿದ್ದರು.

ಈ ಕಾರ್ಯಕ್ರಮ ವಿರೋಧಿಸಿ ಕೇರಳ ಶಿವಸೇನಾ ಜಿಲ್ಲಾ ಘಟಕ ಮತ್ತು ವಿದ್ಯಾರ್ಥಿ ಒಕ್ಕೂಟ ಹಾಗೂ ಮುಸ್ಲಿಂ ಸಂಘಟನೆಯೊಂದು ಪ್ರತಿಭಟನಾ ಮೆರವಣಿಗೆ ನಡೆಸಿದವು. ‘ಪ್ರೀತಿಯ ಚುಂಬನ ಕಾರ್ಯಕ್ರ­ಮವು ಕೇರಳ ಸಂಸ್ಕೃತಿಗೆ ವಿರೋಧ­ವಾಗಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಕಾರ್ಯಕ್ರಮ ವಿರೋಧಿ­ಸಲು ಆಗಮಿಸಿದ ವ್ಯಕ್ತಿ­ಯೊಬ್ಬರು ಹೇಳಿದರೆ, ಇದೇ ಸ್ಥಳದ­ಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸಂಘಟಕರಿಗೆ ಬೆಂಬಲ ಸೂಚಿಸಿದ. ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ಪೊಲೀಸರು ಚದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT