ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಅಡಿ ಬಾಲಕ ಬಂಧನ

Last Updated 27 ಮೇ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕುಮಾರಸ್ವಾಮಿ ಬಡಾವಣೆ ಬಳಿ ಮನೆಯೊಂದರಲ್ಲಿ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

‘ಸಂತ್ರಸ್ತ ಬಾಲಕಿಯರ ಪಾಲಕರು ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಬಾಲಕನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ)   ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಕುಮಾರಸ್ವಾಮಿ ಲೇಔಟ್‌ ಪೊಲೀಸರು ತಿಳಿಸಿದರು.

‘ಶಾಲೆ ಬಿಟ್ಟಿರುವ ಬಾಲಕ, ತನ್ನ ತಂದೆ–ತಾಯಿಯೊಂದಿಗೆ ವಾಸವಿದ್ದಾನೆ. ಪಾಲಕರು ಕೂಲಿ ಕಾರ್ಮಿಕರಾಗಿದ್ದು, ಪ್ರತಿದಿನ ಬೆಳಿಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಮರಳುತ್ತಾರೆ. ಮೂರು ದಿನಗಳ ಹಿಂದೆ ಪಾಲಕರು ಕೆಲಸಕ್ಕೆ ಹೋದ ವೇಳೆ ಬಾಲಕನು ತನ್ನ ಪಕ್ಕದ ಮನೆಯ ಆರು ವರ್ಷದ ಇಬ್ಬರು ಬಾಲಕಿಯರನ್ನು ಮನೆಗೆ  ಕರೆದುಕೊಂಡು ಹೋಗಿದ್ದ. ಒಬ್ಬ ಬಾಲಕಿಯ ಕಾಲು ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಜತೆಗೆ ಇನ್ನೊಬ್ಬಳಿಗೂ ಹಲವು ಬಾರಿ ಅದೇ ರೀತಿ ಕಿರುಕುಳ ನೀಡಿದ್ದಾನೆ ಎಂದು ಪಾಲಕರು ದೂರಿದ್ದಾರೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT