ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರು, ಸಿಬ್ಬಂದಿ ಜತೆ ಕಮಿಷನರ್‌ ಚರ್ಚೆ

ವಿಬ್ಗಯೊರ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ
Last Updated 22 ಜುಲೈ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪೊಲೀಸ್‌ ಕಮಿ­ಷ­ನರ್‌ ಎಂ.ಎನ್‌.ರೆಡ್ಡಿ ಅವರು ವಿಬ್ಗ­ಯೊರ್‌ ಶಾಲೆಗೆ ಮಂಗಳವಾರ ಭೇಟಿ ನೀಡಿ ಪೋಷಕರು ಮತ್ತು ಸಿಬ್ಬಂದಿ­ಯೊಂ­ದಿಗೆ ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಶಾಲೆಯ ಒಂದನೇ ತರಗತಿ ವಿದ್ಯಾ­ರ್ಥಿನಿ ಮೇಲೆ ನಡೆ­ದಿದ್ದ ಅತ್ಯಾ­ಚಾರ ಪ್ರಕ­ರಣ ಸಂಬಂಧ ರೆಡ್ಡಿ ಅವರು ಪೋಷಕರು ಹಾಗೂ ಸಿಬ್ಬಂದಿ­ಯಿಂದ ಮಾಹಿತಿ ಪಡೆದುಕೊಂಡರು.ಶಾಲೆಯನ್ನು ಬೇಗನೆ ಪುನರಾರಂಭ ಮಾಡಿಸ­ಬೇಕು. ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊ­ಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡ­ಬೇಕು. ಅತ್ಯಾಚಾರ ಪ್ರಕರಣ ಸಂಬಂಧ ಆಡ­­ಳಿತ ಮಂಡಳಿ ವಿರುದ್ಧವೂ ಶಿಸ್ತು ಕ್ರಮ ಜರು­ಗಿಸ­ಬೇಕೆಂದು ಪೋಷಕರು, ರೆಡ್ಡಿ ಅವ­ರಿಗೆ ಮನವಿ ಮಾಡಿದರು.

ಪೋಷಕರ ಮನವಿಗೆ ಸ್ಪಂದಿಸಿದ ಕಮಿ­ಷನರ್‌, ‘ಈಗಾಗಲೇ ಆರೋಪಿ­ಯನ್ನು ಬಂಧಿ­ಸಲಾಗಿದೆ. ಸಿಬ್ಬಂದಿ ವಿಳಂಬ ಮಾಡದೆ ಸಾಧ್ಯವಾದಷ್ಟು ಬೇಗನೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ವರದಿ ನೀಡಲಿದ್ದಾರೆ. ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಆ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದರು.

‘ಇಂತಹ ಪ್ರಕರಣಗಳು ಮರು­ಕಳಿಸದಂತೆ ಎಚ್ಚರ ವಹಿಸಲು ಆಡ­­ಳಿತ ಮಂಡಳಿಗೆ ಸೂಚನೆ ನೀಡ­ಲಾಗಿದೆ. ಮಕ್ಕಳ ಹಿತದೃಷ್ಟಿ­ಯಿಂದ ಸುರ­ಕ್ಷತಾ ಕ್ರಮ­ಗಳನ್ನು  ಕೈಗೊಳ್ಳು­ವಂತೆಯೂ ಸೂಚಿ­ಸ­­­ಲಾ­ಗಿದೆ’ ಎಂದು ಭರವಸೆ ನೀಡಿದರು. ಬಳಿಕ ಅವರು ವಿಧಾನ­ಸೌಧಕ್ಕೆ ತೆರಳಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕ­ರಣದ ಮಾಹಿತಿ ನೀಡಿದರು.

ವೈಟ್‌ಫೀಲ್ಡ್‌ ಶಾಲೆ ಮೇಲೂ ದೂರು ದಾಖಲಿಸಿ: ಆರೋಪಿ ಮುಸ್ತಫಾನ ದುಷ್ಕೃತ್ಯದ ಬಗ್ಗೆ ಪೊಲೀ­ಸರಿಗೆ ಈ ಹಿಂದೆ ಮಾಹಿತಿ ನೀಡದ ವೈಟ್‌ಫೀಲ್ಡ್‌ನ ಶಾಲೆಯ ವಿರುದ್ಧವೂ ಶಿಸ್ತು ಕ್ರಮ ಜರು­ಗಿಸುವಂತೆ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಒತ್ತಾಯಿಸಿ­ದ್ದಾರೆ.

ವಿದ್ಯಾರ್ಥಿನಿಯರೊಂದಿಗೆ ಅನುಚಿತ­ವಾಗಿ ವರ್ತಿಸಿದ ಮುಸ್ತಫಾ­­ನನ್ನು ವೈಟ್‌ಫೀಲ್ಡ್‌ನ ಶಾಲಾ ಆಡ­ಳಿತ ಮಂಡಳಿ ಸದ­ಸ್ಯರು ಸೇವೆ­ಯಿಂದ ವಜಾ­ಗೊಳಿಸಿ­ದ್ದರು. ಆದರೆ, ಅವರು ಪೊಲೀಸರಿಗೆ ದೂರು ನೀಡದೆ ಮುಸ್ತಫಾನ ಅಪ­ರಾಧ ಕೃತ್ಯಕ್ಕೆ ಪರೋಕ್ಷ­ವಾಗಿ ಕುಮ್ಮಕ್ಕು ನೀಡಿದಂತಾ­ಗಿದೆ. ಆದ್ದರಿಂದ ಅವರ ವಿರುದ್ಧವೂ ದೂರು ದಾಖಲಿಸಬೇಕು ಎಂದು ತಿಳಿಸಿದ್ದಾರೆ.

ಮಾನ್ಯತೆ ರದ್ದು ಪತ್ರ: ಪುನರ್‌ ಪರಿಶೀಲನೆಗೆ ಸರ್ಕಾರ ನಿರ್ಧಾರ
ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯವನ್ನು ಗಮನ­ದಲ್ಲಿಟ್ಟು­ಕೊಂಡು ಹಾಗೂ ಆದಷ್ಟು ಬೇಗ ತರಗತಿಗಳು ಆರಂಭ­ವಾಗುವಂತೆ ಮಾಡುವುದ­ಕ್ಕಾಗಿ ವಿಬ್ಗಯೊರ್‌ ಶಾಲೆಯ ಮಾನ್ಯತೆ­ಯನ್ನು ರದ್ದುಗೊಳಿಸಬೇಕೆಂದು ಭಾರ­ತೀಯ ಪ್ರೌಢ ಶಿಕ್ಷಣ ಮಂಡಳಿಗೆ (ಐಸಿಎಸ್‌ಇ) ಮಾಡಿ­ರುವ ಶಿಫಾರಸನ್ನು ಪುನರ್‌ ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಸಂಬಂಧ, ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸು­ವಂತೆ  ಸರ್ಕಾರವು ಜುಲೈ 21ರಂದು ಐಸಿಎಸ್‌ಇಗೆ ಶಿಫಾ­ರಸು ಮಾಡಿತ್ತು.ಶಾಲೆಗೆ ನೀಡಿರುವ ಮಾನ್ಯತೆಯನ್ನು ರದ್ದುಪಡಿಸದಂತೆ ಪೋಷಕರಿಂದ ಮನವಿ­ಗಳು ಬಂದಿರುವುದರಿಂದ ನಿರ್ಧಾರ ಮರು ಪರಿಶೀಲಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ತಿಳಿಸಿರುವು­ದಾಗಿ  ಇಲಾಖೆಯ ಪ್ರಧಾನ ಕಾರ್ಯ­ದರ್ಶಿ ರಾಜ್‌ಕುಮಾರ್‌ ಖತ್ರಿ ಹೇಳಿದ್ದಾರೆ.

ಈ ನಡುವೆ, ಕಿಮ್ಮನೆ ರತ್ನಾಕರ ಅವರು  ವಿಬ್ಗಯೊರ್‌ ಶಾಲೆಯ ಸಿಬ್ಬಂದಿ­ಯೊಂದಿಗೆ ಮಾತುಕತೆ ನಡೆಸಿ, ಪೋಷ­ಕರು ಎತ್ತಿರುವ ವಿಚಾರಗಳನ್ನು ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT