ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರೇ ಸರಿಯಾದ ನಿರ್ಧಾರಕರು

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿದ್ಯಾಭ್ಯಾಸಕ್ಕೆ ಮಾತ್ರ ಗಂಡು ಹೆಣ್ಣು ಎಂಬ ಬೇಧವಿಲ್ಲದೆ ಅವರ ಸಾಮರ್ಥ್ಯಕ್ಕೆ ತಕ್ಕಷ್ಟು ಓದುವ ತನಕ ಮದುವೆ ಮಾಡಬಾರದು. ಆದರೆ ಓದಿ ಕೆಲಸಕ್ಕೆ ಸೇರಿ ತಮ್ಮ ಕಾಲ ಮೇಲೆ ತಾವು ನಿಂತ ಮೇಲೆ ಅದರಲ್ಲೂ ಹೆಣ್ಣು ಮಕ್ಕಳು ಅನವಶ್ಯಕವಾಗಿ ಮದುವೆ ಮುಂದೂಡುವುದು ಸರಿಯಲ್ಲ. ಪರವೂರಿನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಪಿ.ಜಿ, ಹಾಸ್ಟೆಲ್ ಅಥವಾ ನೆಂಟರ ಮನೆಯಲ್ಲಿ ಉಳಿಯಬೇಕಾಗುತ್ತದೆ.
ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಗೃಹಿಣಿಯರಾದರೆ ಗಂಡ, ಅತ್ತೆ, ಮಾವ ಹೀಗೆ ಕುಟುಂಬದವರ ಜೊತೆ ಇರುವುದರಿಂದ ಅನುಕೂಲವೂ ಆಗುತ್ತದೆ.


ಇನ್ನು ಮದುವೆಯ ವಯಸ್ಸನ್ನು ಮಕ್ಕಳಿಗೆ ಬಿಡದೆ ಪೋಷಕರೇ ನಿರ್ಧರಿಸುವುದು ಒಳಿತು. ಮಕ್ಕಳಿಗಿನ್ನು ಹುಡುಗಾಟದ ವಯಸ್ಸು, ಮದುವೆ ಎಂಬುದು ಬಂಧನ, ತಮ್ಮ ಸ್ವತಂತ್ರಕ್ಕೆ ಧಕ್ಕೆ ಬರುತ್ತದೆ ಎಂದು ಸುಮ್ಮನೆ ಮದುವೆ ಮುಂದೂಡುತ್ತಾರೆ. ಪಾಲಕರಿಗೆ ಅವರದೇ ಆದ ಜವಾಬ್ದಾರಿಗಳಿರುತ್ತವೆ. ಅವರ ನಂತರ ತಂಗಿ ತಮ್ಮ ಇದ್ದರೆ ಮುಂದೆ ಅವರಿಗೂ ಮದುವೆ ಮಾಡಬೇಕಾಗುತ್ತದೆ. ಹೆತ್ತವರ ಹಣಕಾಸಿನ ಪರಿಸ್ಥಿತಿ, ಆರೋಗ್ಯ ಎಲ್ಲವನ್ನು ಯೋಚಿಸಿದಾಗ ಮಕ್ಕಳು ಓದಿ ಕೆಲಸಕ್ಕೆ ಸೇರಿ ಒಂದು ಹಂತಕ್ಕೆ ಬಂದ ಮೇಲೆ ಮಗ/ಮಗಳು ತಂದೆ ತಾಯಿಯರ ಮಾತು ಕೇಳಿ ಯೋಗ್ಯವಾದವರನ್ನು ಮದುವೆಯಾದರೆ ಹೆತ್ತವರಿಗೂ ಸಂತೋಷ ಮತ್ತು ಅವರ ಮುಂದಿನ ಜೀವನವೂ ಸುಖವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT