ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರನ್ನು ಮರೆತ ಸರ್ಕಾರ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸ್ವಚ್ಛತಾ ಅಭಿಯಾನ’ ದೇಶದಲ್ಲಷ್ಟೆ ಅಲ್ಲ ವಿದೇಶದಲ್ಲೂ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸ್ಥಳೀಯ ಸಣ್ಣ–ಪುಟ್ಟ ನಾಯಕರು ಕೂಡ ಪೊರಕೆ– ಗುದ್ದಲಿಗಳನ್ನು ಹಿಡಿದು ಮಾಧ್ಯಮ­ಗಳೆ­ದುರು ಸಾಂಕೇತಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈಗೀಗ ಶಾಲಾ– ಕಾಲೇಜು­ಗಳಿಗೂ ಈ ಅಭಿಯಾನ ವಿಸ್ತರಿಸಿದೆ. ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಆಂದೋಲನವಾದರೂ, ಪುರಸಭೆ­ಗಳಿಂದ ಮಹಾನಗರಗಳ  ಬೀದಿ ಗುಡಿಸಿ, ಕಸ ಎತ್ತುವ ಪೌರ ಕಾರ್ಮಿಕರ ಬಗ್ಗೆ ಇದುವರೆಗೂ ಯಾರೂ ಸೊಲ್ಲೆತ್ತಿಲ್ಲ.

ಪಟ್ಟಣ ಮತ್ತು ನಗರಗಳ ನೈರ್ಮಲ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಪೌರ ಕಾರ್ಮಿಕರ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ ಕುರಿತು ರಾಷ್ಟ್ರ­ಮಟ್ಟದಲ್ಲಿ ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲ. ಹೀಗಿರುವಾಗ ‘ಸ್ವಚ್ಛತಾ ಅಭಿ­ಯಾನ’ದ ನಿಜವಾದ ಉದ್ದೇಶ ಈಡೇರುವುದಾದರೂ ಹೇಗೆ? ಮನೆ ಮತ್ತು ಕಚೇರಿ­ಯೊಳಗಿನ ಕಸ ಮತ್ತು ಕೊಳಕು ಒಳಗಿನವರಿಗಷ್ಟೆ ಅರಿವಿಗೆ ಬಂದರೆ, ಬೀದಿಯ ಕೊಳಕು ಮತ್ತು ಕಸ ಪ್ರತಿ­ಯೊಬ್ಬರ ಗಮನಕ್ಕೂ ಬರುತ್ತದೆ. ಆದರೆ ಯಾರೂ ಇದನ್ನು ಸ್ವಚ್ಛಗೊಳಿಸುವ ಅಥವಾ ವಿಲೇವಾರಿ ಮಾಡುವ ಗೊಡವೆಗೆ ಹೋಗುವುದಿಲ್ಲ. ಬದಲಿಗೆ ಆ ಕೆಲಸ­ಗಳೇ­ನಿದ್ದರೂ ಪೌರ ಕಾರ್ಮಿಕರಿ­ಗಷ್ಟೆ ಸೀಮಿತ. ಹಾಗಾಗಿ ಅವರ ಹಾಗೂ ಅವರ ವೃತ್ತಿ ಸಮಸ್ಯೆ­ಗಳು ಬಗೆಹರಿದಾಗ ಮಾತ್ರ ಈ ‘ಸ್ವಚ್ಛತಾ ಅಭಿಯಾನ’ಕ್ಕೆ ನಿಜವಾ­ಗಿಯೂ ಅರ್ಥ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT