ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರು ಆರೋಗ್ಯ ರಕ್ಷಣೆಗೆ ಒತ್ತು ನೀಡಿ

ಚಿತ್ರದುರ್ಗ: ಪೌರ ಕಾರ್ಮಿಕರ ಸನ್ಮಾನದಲ್ಲಿ ಯೋಜನಾ ನಿರ್ದೇಶಕಿ ಶುಭಾ
Last Updated 27 ಜುಲೈ 2016, 9:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರ ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ವಿವಿಧ ರೀತಿಯ ಸೌಲಭ್ಯ ನೀಡಿದ್ದು, ಅವುಗಳನ್ನು ಬಳಸಿಕೊಂಡು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಸಲಹೆ ನೀಡಿದರು.

ನಗರದ ಹಳೆ ನಗರಸಭೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಗರ ಸಭೆಯಿಂದ ಎಸ್‌ಎಫ್‌ಸಿ ಹಾಗೂ ನಗರಸಭೆಯ ಶೇ 24.10ರ ಯೋಜನೆ ಯಡಿ ಪೌರ ಕಾರ್ಮಿಕರಿಗೆ ₹ 6 ಲಕ್ಷ ವೆಚ್ಚದ ಸುರಕ್ಷಾ ಕವಚ ವಿತರಣೆ, ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರಿಗೆ ಸನ್ಮಾನ ಸಮಾ ರಂಭದಲ್ಲಿ ಮಾತನಾಡಿದರು.

ಸ್ವಚ್ಛತೆಗೆ ನಿಷ್ಕಲ್ಮಶವಾಗಿ ದುಡಿಯುವ ಪೌರ ಕಾರ್ಮಿಕರನ್ನು ಜನತೆ ಗೌರವಾದ ರಗಳಿಂದ ನೋಡುವ ಅಗತ್ಯವಿದೆ. ತಮ್ಮ ಕಾಯಕದಲ್ಲಿಯೇ ದೇವರನ್ನು ಕಾಣುವ ಪೌರ ಕಾರ್ಮಿಕರ ಸೇವೆ ದೊಡ್ಡದು. ಇಂತಹ ಕಾರ್ಮಿಕರ ಬಗ್ಗೆ ಕಾಳಜಿ ತೋರಬೇಕಾದ್ದು, ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ಮಾತನಾಡಿ, ಪೌರ ಕಾರ್ಮಿಕರು ನಗರದ ಕಣ್ಣಿದ್ದಂತೆ. ಅವರು ನಗರ ಸ್ವಚ್ಛಗೊಳಿಸುವ ಸಲುವಾಗಿ ತಮ್ಮ ಆರೋಗ್ಯ ಪಣಕ್ಕಿಡುತ್ತಾರೆ. ಜನರ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸೇವೆಗೆ ತಿಂಗಳಿಗೆ ಎಷ್ಟು ವೇತನ ನೀಡಿದರೂ ಕಡಿಮೆ. ದಿನನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರಿಗೆ ನಿಯಮಿ ತವಾಗಿ ಆರೋಗ್ಯ ತಪಾಸಣೆ ನಡೆಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಕೆ.ಮಲ್ಲೇಶಪ್ಪ ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ವಾಗಿ ಸೇವೆ ಸಲ್ಲಿಸುತ್ತಿರುವ ರಾಮ ಚಂದ್ರಪ್ಪ, ರಾಮಣ್ಣ, ರಂಗಪ್ಪ, ಕೆ.ಟಿ. ಜಯಣ್ಣ, ಸಣ್ಣ ತಿಪ್ಪಯ್ಯ, ನಾಗರಾಜ್, ಲಕ್ಕಮ್ಮ, ಕಾಮಾಕ್ಷಿ, ದುರುಗಪ್ಪ, ಆನಂದ್, ಮಂಜುನಾಥ್, ಮಂಜಮ್ಮ, ಹೊನ್ನೂರಮ್ಮ, ಬಸವರಾಜ್, ವಾಹನ ಚಾಲಕರಾದ ಅಮಂಜಾದ್ ಅಲಿ, ಇಸಾಕ್ ಸೇರಿ ಒಟ್ಟು 17 ಪೌರ ಕಾರ್ಮಿಕ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸು ತ್ತಿರುವುದು ಶ್ಲಾಘನೀಯ ಎಂದರು.

ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಪೌರ ಕಾರ್ಮಿಕರಿಗೆ ಅಗತ್ಯವಾದ ಗಮ್ ಷೂ, ಕೈ ರಕ್ಷಾ ಕವಚ, ಸಮವಸ್ತ್ರ, ಮಾಸ್ಕ್‌ಗಳನ್ನು ನೀಡಲಾಗಿದೆ. ಅಲ್ಲದೆ, ಪೌರ ಕಾರ್ಮಿಕರು ತೆಗೆದುಕೊಳ್ಳುವ ವೇತನದಲ್ಲಿ ಸರ್ಕಾರ ಶೇ 75ರಷ್ಟು ನೀಡಿದರೆ, ಉಳಿದ ಶೇ 25ರಷ್ಟನ್ನು ನಗರಸಭೆ ಭರಿಸುತ್ತದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತ ರಾಜ್, ವ್ಯವಸ್ಥಾಪಕ ಮಹಾಂತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ಭೀಮರಾಜ್, ಶ್ಯಾಮಲಾ, ರಮೇಶ್, ಹನುಮಂತರೆಡ್ಡಿ, ತಿಮ್ಮಣ್ಣ, ತಿಪ್ಪೇಸ್ವಾಮಿ, ಅನುರಾಧ, ಈರುಳ್ಳಿ ರಘು, ಖಾದರ್ ಖಾನ್, ಸಮುದಾಯ ಸಂಘಟಕಿ ಬಿ.ಆರ್.ಮಂಜುಳಾ, ಆರೋಗ್ಯ ನಿರೀಕ್ಷಕಿ ಸರಳಾ ಇದ್ದರು.

***
ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳು ಒಂದು ದಿನ ಕರ್ತವ್ಯ ನಿರ್ವಹಿಸದಿದ್ದರೂ ಸಮಸ್ಯೆ ಆಗುವುದಿಲ್ಲ. ಆದರೆ, ಪೌರ ಕಾರ್ಮಿಕರು ಒಂದು ದಿನ ಕಾರ್ಯ ನಿರ್ವಹಿಸದಿದ್ದರೆ, ಇಡೀ ನಗರದ ನೈರ್ಮಲ್ಯವೇ ಹಾಳಾಗುತ್ತದೆ.
– ಶುಭಾ, ಯೋಜನಾ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT