ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌಷ್ಟಿಕಾಂಶ ಕಾಪಾಡಿ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣದಿಂದಲೇ  ಬಡಜನರ, ಕೂಲಿಕಾರರ ಹಿತ­ದೃಷ್ಟಿಯಿಂದ  ಒಂದು ರೂಪಾಯಿಗೆ ಒಂದು  ಕೆ.ಜಿ. ಅಕ್ಕಿ ಕೊಡುತ್ತಿರುವುದು ಸಂತೋಷದ ಸಂಗತಿ. ಶಾಲೆ­ಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾ­ಗುತ್ತಿದೆ. ಅಂಗನವಾಡಿಗಳಿಗೂ ಪೌಷ್ಟಿ­ಕಾಂಶದ ಬಿಸಿಯೂಟ ಸರಬರಾಜು ಆಗುತ್ತಿದೆ. 

ಆದರೆ ಅಲ್ಲಿಗೆ ಸರಬರಾಜು ಮಾಡುತ್ತಿರುವ ಅಕ್ಕಿ­ಯನ್ನು ಮೂರು ಮೂರು ಸಾರಿ ಪಾಲಿಷ್‌ ಮಾಡಿ ಮಲ್ಲಿಗೆ ಹೂವಿನಂತಾಗಿಸಿ, ­ ಆಹಾ­ರದ ಪೌಷ್ಟಿಕಾಂಶ ಸೊನ್ನೆಯಾಗು­ವಂತೆ  ಮಾಡಲಾಗುತ್ತಿದೆ.  ಆದ್ದರಿಂದ  ಈ ರೀತಿಯ ಮಲ್ಲಿಗೆ ಹೂವಿನಂತಹ ಬಿಳಿ ಅಕ್ಕಿ ಮಾಡದೆ ಭತ್ತದ ಹೊಟ್ಟು ತೆಗೆದು ಒಂದೇ ಒಂದು ಪಾಲಿಷ್‌ ಮಾಡಿದ ಪೌಷ್ಟಿಕಾಂಶ ಇರು­ವಂತಹ ಅಕ್ಕಿಯನ್ನೇ ಆಹಾರ ಭದ್ರತೆಯ ಕಾರ್ಡು ಹೊಂದಿದವರಿಗೆ, ಬಿಸಿಯೂಟಕ್ಕೆ ಮತ್ತು ಅಂಗನ­ವಾಡಿ­ಗಳಿಗೆ ಸಿಗುವಂತೆ ಸರ್ಕಾರ ಏರ್ಪಾಟು ಮಾಡಬೇಕು.
–ಕಡಿದಾಳು ಶಾಮಣ್ಣ ಭಗವತಿ ಕೆರೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT