ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕ್ವಿಯೊ ವಿರುದ್ಧ ಗೆದ್ದ ಮೇವೆದರ್

Last Updated 3 ಮೇ 2015, 12:51 IST
ಅಕ್ಷರ ಗಾತ್ರ

ಲಾಸ್‌ವೇಗಾಸ್‌, ಅಮೆರಿಕ (ಐಎಎನ್ಎಸ್): ನಿರೀಕ್ಷೆ ನಿಜವಾಯಿತು. ಅಮೆರಿಕದ ಬಾಕ್ಸರ್‌ ಫ್ಲಾಯ್ಡ್‌ ಮೇವೆದರ್ ಆಕರ್ಷಕ ಗುದ್ದುಗಳ ಮೂಲಕ ಫಿಲಿಪ್ಪಿನ್ಸ್‌ನ ಮ್ಯಾನಿ ಪ್ಯಾಕ್ವಿಯೊ ಎದುರು ಗೆಲುವು ಸಾಧಿಸಿದ್ದಾರೆ. ಮೇವೆದರ್‌ಗೆ ಸಂದ 48ನೇ ಗೆಲುವು ಇದಾಗಿದೆ.

ಲಾಸ್‌ವೇಗಾಸ್‌ನ ಎಂಜಿಎಂ ಗ್ರ್ಯಾಂಡ್‌ ಗಾರ್ಡನ್‌ ಅಖಾಡದಲ್ಲಿ ಭಾನುವಾರ ಮುಂಜಾನೆ (ಭಾರತೀಯ ಕಾಲಮಾನ) ನಡೆದ ಪ್ರತಿಷ್ಠಿತ ಹೋರಾಟದಲ್ಲಿ ಮೇವೆದರ್‌ ಅವರು ಪ್ಯಾಕ್ವಿಯೊ ಎದುರು ವಿರೋಚಿತ ಗೆಲುವು ಗಳಿಸಿದರು.

12  ಸುತ್ತಿನ ಹೋರಾಟದಲ್ಲಿ ಮೇವೆದರ್‌ 116–112ರಲ್ಲಿ ಪ್ಯಾಕ್ವಿಯೊ ಅವರನ್ನು ಮಣಿಸಿದರು ಎಂದು ತೀರ್ಪುಗಾರರು ಸರ್ವಾನುಮತದಿಂದ ಪ್ರಕಟಿಸಿದರು.

ಮೈನವಿರೇಳಿಸುವ ಹೋರಾಟದಲ್ಲಿ ಮೇವೆದರ್ ಒಟ್ಟು 435 ಅವಕಾಶಗಳ ಪೈಕಿ 148 ಪಂಚ್‌ಗಳ ಯಶಃ ಪಡೆದರು. ಪ್ಯಾಕ್ವಿಯೊ 429 ಅವಕಾಶಗಳ ಪೈಕಿ 81 ಪಂಚ್‌ಗಳು ಕರಾರುವಾಕ್ಕಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT