ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣವೊಂದಕ್ಕೆ ₨ 3.5 ಕೋಟಿ ವಕೀಲಿ ಶುಲ್ಕ!

ಹರಿಯಾಣ ವಕೀಲರ ಸಂಘಕ್ಕೆ ವಿದೇಶಿ ದಂಪತಿ ದೂರು
Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಧರ್ಮಶಾಲಾ (ಐಎಎನ್‌ಎಸ್): ಟಿಬೆಟ್‌ನ ದೇಶಭ್ರಷ್ಟ ಸರ್ಕಾರ ಇಲ್ಲಿ ನಡೆಸುತ್ತಿರುವ ಮಕ್ಕಳ ಅನಾಥಾಶ್ರಮ­ದೊಂ­ದಿಗೆ ಕಾನೂನು ಹೋರಾಟ ನಡೆಸುತ್ತಿರುವ ವಿದೇಶಿ ದಂಪತಿ ಇದೀಗ ತಮ್ಮ ಪರವಾಗಿ ಕೆಲಸ ನಿರ್ವ­ಹಿಸಿದ ವಕೀಲರ ವಿರುದ್ಧವೇ ಹೋರಾ­ಟಕ್ಕೆ ಇಳಿಯಬೇಕಾದ ಪರಿಸ್ಥಿತಿ­ಯಲ್ಲಿ ಸಿಲುಕಿಕೊಂಡಿದ್ದಾರೆ.

‘ಟಿಬೆಟ್‌ ಮಗುವಿನ ಪಾಲನೆ ಹಕ್ಕಿಗೆ ಸಂಬಂಧಿಸಿದಂತೆ ಚಂಡಿಗಡ ಮೂಲದ ವಕೀಲ ಸಹೋದರರಾದ ರಂಜಿತ್‌ ಮತ್ತು ಅನಿಲ್‌ ಮಲ್ಹೋತ್ರಾ ಅವರು ಕೇವಲ ಒಂಬತ್ತು ತಿಂಗಳಿಗೆ ₨ 3.5 ಕೋಟಿ ದುಬಾರಿ ಶುಲ್ಕ ವಿಧಿಸಿದ್ದಾರೆ’ ಎಂದು ಆರೋಪಿಸಿ ಟಿಬೆಟ್‌ ಸಂಗೀತದ ಸಂಯೋಜಕ ಮತ್ತು ಅಮೆರಿಕ ನಾಗ­ರಿಕ ಕರ್ಮಾ ಲಾಮಾ ಮತ್ತು ಅವರ ಪತ್ನಿ ಇಟಲಿ ಕಲಾವಿದೆ ಪೌಲಾ ಪಿವಿ, ಪಂಜಾಬ್‌ ಮತ್ತು ಹರಿಯಾಣ ವಕೀ­ಲರ ಸಂಘಕ್ಕೆ ದೂರು ಸಲ್ಲಿಸಿ­ದ್ದಾರೆ.

ಸುಮಾರು ₨ 35 ಲಕ್ಷ ಹಣವನ್ನು ಖರ್ಚು ವೆಚ್ಚ ಮತ್ತು ಸಹಾಯಕ ವಕೀ­ಲರಿಗೆ ಎಂದು ಪಾವತಿಸಲಾಗಿದೆ. ₨ 2.5 ಕೋಟಿ ಹಣವನ್ನು ಅಂತರ­ರಾಷ್ಟ್ರೀಯ ಬ್ಯಾಂಕ್‌ ಖಾತೆಯ ಮೂಲಕ ವರ್ಗಾಯಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ‘ನಾವೇನೂ ತಪ್ಪು ಮಾಡಿಲ್ಲ’ ಎಂದಿರುವ ಮಲ್ಹೋತ್ರಾ ಸಹೋದ­ರರು ‘ಆ ದಂಪತಿ ಜತೆ ಸಮಾ­ಲೋ­ಚಿಸಿ, ಅವರ ಒಪ್ಪಿಗೆ ಪಡೆದುಕೊಂಡ ನಂತ­ರವೇ ಶುಲ್ಕ­ವನ್ನು ವಿಧಿಸಿದ್ದೇವೆ’ ಎಂದು ಹೇಳಿ­ದ್ದಾರೆ. ವಿದೇಶಿ ದಂಪತಿ ದೂರು ನೀಡಿ­­ರು­ವು­ದನ್ನು ವಕೀಲರ ಸಂಘ ಅಧ್ಯಕ್ಷ ರಾಕೇಶ್‌ ಗುಪ್ತ ಖಚಿತ­ಪಡಿಸಿದ್ದಾರೆ.

ಪ್ರಕರಣದ ವಿವರ: ಏಳು ವರ್ಷ ವಯ­ಸ್ಸಿನ ಅನಾಥ ಮಗುವಿನ ಪಾಲನೆಗೆ ಸಂಬಂ­ಧಿ­ಸಿದಂತೆ ವಿದೇಶಿ ದಂಪತಿ ಧರ್ಮಶಾಲಾ ನಗರದ ‘ಟಿಬೆ­ಟಿಯನ್‌ ಚಿಲ್ಡ್ರನ್ಸ್‌ ವಿಲೇಜ್‌’ ಎಂಬ ಮಕ್ಕಳ ಅನಾ­ಥಾಲಯದ ವಿರುದ್ಧ ಕಾನೂನು ಹೋರಾಟ ನಡೆಸಿದ್ದಾರೆ. ಹಿಮಾ­ಚಲ ಪ್ರದೇಶ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಇನ್ನೂ ಬಾಕಿಯಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT