ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಗಾಮಿ ಸಿದ್ಧಾಂತ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅನಂತಮೂರ್ತಿ ಅವರ ನಿಧನಕ್ಕೆ ಕೆಲ ರೋಗ­ಗ್ರಸ್ತ ಮನಸ್ಸುಗಳು ಸಂಭ್ರಮ ವ್ಯಕ್ತಪಡಿಸಿ­ರು­ವು­ದರಲ್ಲಿ ಅಚ್ಚರಿಯೇನೂ ಇಲ್ಲ. ವಿಚಾ­ರ­ವನ್ನು ವಿಚಾರದ ಮೂಲಕ ಎದುರಿಸುವ ಬದಲು ಆ ವಿಚಾರದ ಪ್ರತಿಪಾದಕನನ್ನೇ ಮುಗಿಸಿ­ಬಿಡ­ಬೇಕು ಎನ್ನುವ ಪ್ರತಿಗಾಮಿ ಸಿದ್ಧಾಂತವೊಂದರ ಬಹು­ಮುಖ್ಯ ಭಾಗವಿದು. 1948ರಷ್ಟು ಹಿಂದೆಯೇ ಗಾಂಧೀಜಿ ಅವರನ್ನು ಕೊಂದ ಮತ್ತು ಅವರ ಸಾವನ್ನು ಸಿಹಿ ಹಂಚಿ ಸಂಭ್ರ­ಮಿಸಿದ ಅದೇ ಸಿದ್ಧಾಂತ ಇಂದಿಗೂ ಜೀವಂತ­ವಾಗಿ ಇರುವು­ದಷ್ಟೇ ಅಲ್ಲ, ದಿನ­ದಿಂದ ದಿನಕ್ಕೆ ಅದು ಬಲಗೊಳ್ಳು­ತ್ತಿ­ರುವ ಹಿನ್ನೆಲೆಯಲ್ಲಿ, ಇದು ಅಂತಹ ಕೊನೆಯ ಘಟನೆಯೂ ಆಗಿರುವುದಿಲ್ಲ.

ಹಾಗೆ ನೋಡಿದರೆ ಧರ್ಮ, ದೇವರು, ಸಂಸ್ಕೃತಿ, ದೇಶಪ್ರೇಮ ಮೊದಲಾದವುಗಳ ಪ್ರಾಥ­ಮಿಕ ತಿಳಿವಳಿಕೆಯೂ ಇಲ್ಲದೆ, ಸಾವನ್ನು
ಸಂಭ್ರಮಿ­ಸಿ ಮಹತ್ತರವಾದುದನ್ನು ಸಾಧಿಸಿ­ದ್ದೇವೆ ಅಂದುಕೊಳ್ಳುವ ಆ ಮುಗ್ಧರನ್ನು ಖಂಡಿಸಿ  ಪ್ರಯೋ­ಜನವಿಲ್ಲ. ಅವರು ಕೇವಲ ಪಾತ್ರ­ಧಾರಿ­ಗಳು. ಖಂಡಿಸಬೇಕಿರುವುದು ಧರ್ಮ, ದೇವರು, ಸಂಸ್ಕೃತಿಯ ಹೆಸರಿನಲ್ಲಿ ಅವರ ತಲೆ ಕೆಡಿಸಿ ಮಾನವತೆಯ ಶತ್ರುಗಳಾಗುವಂತೆ ಅವರನ್ನು ಛೂ ಬಿಟ್ಟಿರುವ ತೆರೆಮರೆಯ ಸೂತ್ರಧಾರಿ­ಗ­ಳನ್ನು. ತಾವು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆತ್ಮಾವಲೋಕನ ಮಾಡಿ­ಕೊಳ್ಳಬೇಕಾದುದು ಈ ಸೂತ್ರಧಾರಿಗಳು. ಆದರೆ ಆತ್ಮವೇ ಇಲ್ಲದ ಮಂದಿ ಆತ್ಮಾವಲೋಕನ ಮಾಡಿ­ಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖ­ತನ­ವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT