ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಜತೆಗಿದ್ದಾಗಲೇ ಎಸ್‌ಪಿಜಿ ಮುಖ್ಯಸ್ಥ ಬದಲು

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿಷ್ಠಿತ ವಿಶೇಷ ರಕ್ಷಣಾ ದಳದ (ಎಸ್‌ಪಿಜಿ) ಮುಖ್ಯಸ್ಥ ಹಿರಿಯ ಐಪಿಎಸ್‌ ಅಧಿ­ಕಾರಿ ಕೆ. ದುರ್ಗಾ ಪ್ರಸಾದ್‌ ಅವರ ಅಧಿಕಾರದ ಅವಧಿ ವಿಸ್ತರಿಸಲು ಸರ್ಕಾರ ನಿರಾಕರಿಸಿದೆ. ಸಂಪುಟದ ಮೇಲಿನ ನೇಮಕಾತಿ ಸಮಿ­ತಿಯ ನಿರ್ದೇಶನದಂತೆ ಉತ್ತರಾಧಿ­ಕಾರಿ ನೇಮ­ಕ­ದವರೆಗೆ ಹಿರಿಯ ಅಧಿಕಾರಿ ಎಸ್‌. ಚತುರ್ವೇದಿ ಅವರು ಎಸ್‌ಪಿಜಿ ಉಸ್ತು­ವಾರಿ ನೋಡಿ­ಕೊಳ್ಳಲಿ­ದ್ದಾರೆ ಎಂದು ಸರ್ಕಾರ ತಿಳಿಸಿದೆ.

ಔಪಚಾರಿಕವಾಗಿ ಪ್ರಸಾದ್‌ ಅವರ ಅಧಿ­­­ಕಾರಾವಧಿ ಈ ತಿಂಗಳ 2ರಂದೇ ಕೊನೆ­ಗೊಂಡಿದೆ. ಆದರೆ ಸಾರ್ಕ್‌ ಶೃಂಗ­ಸಭೆ­ಯಲ್ಲಿ ಭಾಗವಹಿ­ಸಲು ಪ್ರಧಾನಿ ನರೇಂದ್ರ ಮೋದಿ ಅವ­ರ ಜೊತೆ ನೇಪಾ­ಳ­ಕ್ಕೆ ತೆರಳಿರುವಾಗಲೇ ಪ್ರಸಾದ್‌ ಅವರ ಸೇವೆಯನ್ನು ಸರ್ಕಾರ ಕೊನೆ­ಗೊಳಿಸಿರು­ವುದು ಅಚ್ಚರಿಗೆ ಕಾರಣ­ವಾಗಿದೆ.

2011ರ ನವೆಂಬರ್‌ನಲ್ಲಿ ಪ್ರಸಾದ್‌ ಅವರನ್ನು ಎಸ್‌ಪಿಜಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 1981ರ ಬ್ಯಾಚ್‌ನ ಆಂಧ್ರಪ್ರದೇಶ ಕೇಡರ್‌ ಐಪಿಎಸ್‌ ಅಧಿ­ಕಾರಿ ಪ್ರಸಾದ್‌ ಹೆಸರನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನೇತೃ­ತ್ವದ ಸಂಪುಟ ನೇಮಕಾತಿ ಸಮಿತಿ ಅಂತಿ­ಮಗೊಳಿಸಿತ್ತು. ಎಸ್‌ಪಿಜಿ ಸಿಬ್ಬಂದಿ ಹಾಲಿ ಪ್ರಧಾನಿ ಮಾತ್ರವಲ್ಲದೆ, ಮಾಜಿ ಪ್ರಧಾನಿಗಳು ಮತ್ತು ಅವರ ಹತ್ತಿರದ ಕುಟುಂಬಕ್ಕೂ ರಕ್ಷಣೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT