ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಫೇಸ್‌ಬುಕ್‌ಗೆ ‘ಮೆಚ್ಚುಗೆ’

Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ಕಾರ್ಯಾಲಯದ ಅಧಿಕೃತ ಫೇಸ್‌ ಬುಕ್‌ ಪುಟ ಉದ್ಘಾ­ಟನೆಯಾಗಿ ನಾಲ್ಕು ದಿನಗಳಲ್ಲೇ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆಕರ್ಷಿಸಿದೆ.

ಮುಖಪುಟದಲ್ಲಿ ಪ್ರಧಾನಿ ಮೋದಿ ಚಿತ್ರವಿದೆ. ಇದಲ್ಲದೇ, ನೂತನ ಪ್ರಧಾನಿ­ಯವರನ್ನು ಅಭಿನಂದಿಸಿದ ಪ್ರಮುಖರ ಚಿತ್ರಗಳೂ ಫೇಸ್‌ಬುಕ್‌ ಪುಟದಲ್ಲಿವೆ. ‘ವಿಶ್ವ ತಂಬಾಕು ವಿರೋಧಿ ದಿನ’ದ ಪ್ರಯುಕ್ತ ಪ್ರಧಾನಿ ನೀಡಿದ ಸಂದೇಶಕ್ಕೆ ಸಾವಿರಾರು ಮಂದಿ ‘ಮೆಚ್ಚುಗೆ’ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನೂರಾರು ಮಂದಿ ಪ್ರತಿಕ್ರಿಯೆ ಹಾಗೂ ಸಲಹೆ ನೀಡಿದ್ದಾರೆ.

‘ತಂಬಾಕು ಉತ್ಪನ್ನಗಳ ಬೆಲೆ ಏರಿಸಿ. ಇದರಿಂದ ತಂಬಾಕು ಸೇವನೆ ಕಡಿಮೆ­ಯಾ­ಗುತ್ತದೆ’ ಎಂದು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ.
‘ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯನ್ನು ನಿಷೇಧಿಸ­ಬೇಕು’ ಎನ್ನುವುದು ಮತ್ತೊಬ್ಬರು ಕೊಟ್ಟ ಸಲಹೆ.
ಪ್ರಧಾನಿ ಟ್ವಿಟರ್‌್ ಖಾತೆ ಕೂಡ ಹಲವರನ್ನು ಆಕರ್ಷಿಸಿದೆ.

ಜನರೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳನ್ನು ಸಕ್ರಿಯ­ವಾಗಿ ಬಳಸುತ್ತಿರುವ ಮೋದಿ, ತಮ್ಮ ಸಂಪುಟದ ಸಹೋದ್ಯೋಗಿಗಳು ಕೂಡ ಇದನ್ನು ಬಳಸಬೇಕೆಂದು ನಿರೀಕ್ಷಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT