ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಹೊಗಳಿದ ಶಿವಸೇನಾ

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಗೆ ಬಿಜೆಪಿ ಮತ್ತು ಶಿವಸೇನಾ ನಡುವೆ ತೆರೆಮರೆಯ ಕಸರತ್ತು­ಗಳು ನಡೆಯುತ್ತಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಶಿವಸೇನಾ, ಹಿಂದಿನ ಯುಪಿಎ ಸರ್ಕಾರವನ್ನು ತೆಗಳಿದೆ.

ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಗೆ ನರೇಂದ್ರ ಮೋದಿ ಅವರು ಭಾನುವಾರ ದೀಪಾವಳಿ ಚಹಾಕೂಟ ಹಮ್ಮಿ­ಕೊಂಡಿದ್ದನ್ನು ಶಿವಸೇನಾ ಪ್ರಶಂಸಿಸಿದೆ. ದೇಶದ ಸಾಂಸ್ಕೃತಿಕ ಮುಖವನ್ನು ನರೇಂದ್ರ ಮೋದಿ  ಬದಲಾಯಿತ್ತಿದ್ದಾರೆ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಿದೆ.

ಇಫ್ತಾರ್‌ ಕೂಟಗಳನ್ನು ಆಯೋಜನೆ ಮಾಡಿ  ಹಿಂದಿನ ಕಾಂಗ್ರೆಸ್‌ ಸರ್ಕಾರ ಅಲ್ಪ­ಸಂಖ್ಯಾತ ಸಮುದಾಯವನ್ನು ಓಲೈಸಿ ಮತಬ್ಯಾಂಕ್‌ ಗಟ್ಟಿಮಾಡಿ ಕೊಳ್ಳಲು ಮುಂದಾ­ಗಿತ್ತು  ಎಂದು  ಆರೋಪಿಸಿದೆ.

‘ಈವರೆಗೆ ಈದ್‌ ಹಬ್ಬದ ವೇಳೆಯಲ್ಲಿ ನಾಯಕರು ಇಫ್ತಾರ್‌ ಕೂಟಗಳನ್ನು ಮಾತ್ರ ಆಯೋಜಿಸುತ್ತಿದ್ದರು. ಆದರೆ ಈಗ ದೀಪಾವಳಿಯನ್ನೂ ಆಚರಿಸಲಾಗು ತ್ತದೆ. ಇದೊಂದು ಗಮನಾರ್ಹವಾದ ಬದಲಾವಣೆ. ಅಲ್ಲದೆ ಎಲ್ಲರೂ ಮೆಚ್ಚತಕ್ಕ ಕಾರ್ಯ. ಈ ಮೂಲಕ ಮೋದಿ ಅವರು ದೇಶದ ಸಾಂಸ್ಕೃತಿಕ ಮುಖವನ್ನು ಬದಲಾಯಿಸುತ್ತಿದ್ದಾರೆ ಎಂದು ಸಂಪಾದಕೀಯ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT