ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸದ ಮೂಡ್‌ನಲ್ಲಿ ಅಲ್ಲು ಅರ್ಜುನ್‌

Last Updated 6 ಮೇ 2015, 19:30 IST
ಅಕ್ಷರ ಗಾತ್ರ

ಬಿಡುವಿಲ್ಲದಂತೆ ಚಿತ್ರೀಕರಣ ಹಾಗೂ ಚಿತ್ರಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ತೆಲುಗು ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಈಗ ಪ್ರವಾಸದ ಮೂಡ್‌ನಲ್ಲಿದ್ದಾರೆ. ಕುಟುಂಬ ಸಮೇತರಾಗಿ ಮೂರು ವಾರ ಬ್ರಿಟನ್‌ ಪ್ರವಾಸ ಕೈಗೊಂಡು ಚಿಲ್‌ ಆಗುವ ಯೋಚನೆ ಅವರದ್ದು.

‘ಕಳೆದ ಎರಡು ವಾರಗಳಿಂದ ಬಿಡುವಿಲ್ಲದಂತೆ ಚಿತ್ರಪ್ರಚಾರದಲ್ಲಿ ಭಾಗವಹಿಸಿದ್ದೆ. ನಿರಂತರ ಓಡಾಟ ನನ್ನನ್ನು ಒತ್ತಡಕ್ಕೆ ದೂಡಿತ್ತು. ಹಾಗಾಗಿ ಮೂರು ವಾರ ಆಯಾಗಿ ಇದ್ದು ಬರಲು ಬ್ರಿಟನ್‌ ಪ್ರವಾಸ ಕೈಗೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅಲ್ಲು.

ಅಂದಹಾಗೆ, ಕುಟುಂಬ ಸಮೇತರಾಗಿ ಬ್ರಿಟನ್‌ಗೆ ತೆರಳುತ್ತಿರುವ ಅಲ್ಲು ಅರ್ಜುನ್‌,  ಬೋಯಪತಿ ಶ್ರೀನು ನಿರ್ದೇಶನದ ಚಿತ್ರ ಶುರುವಾದರೆ ಅರ್ಧದಲ್ಲೇ ವಾಪಾಸಾಗುವ ಯೋಚನೆಯಲ್ಲಿದ್ದಾರೆ.ಕುಟುಂಬದರನ್ನು ಅಲ್ಲೇ ಬಿಟ್ಟು ಅವರು ಮಾತ್ರ ಭಾರತಕ್ಕೆ ಬರುತ್ತಾರೆ ಎಂದಿವೆ ಅಲ್ಲು ಆಪ್ತ ಮೂಲಗಳು.

ಅಲ್ಲು ಅರ್ಜುನ್ ಅಭಿನಯದ ‘ಸನ್‌ ಆಫ್‌ ಸತ್ಯಮೂರ್ತಿ’ ಚಿತ್ರ ಮೂರು ವಾರದಲ್ಲಿ ಭರ್ಜರಿ ಎಂಬತ್ತು ಕೋಟಿ ಗಳಿಸಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT