ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಸಾವಿನ ಸಂಖ್ಯೆ ಹೆಚ್ಚಳ

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಶಿಲ್ಲಾಂಗ್‌ (ಪಿಟಿಐ): ಮೇಘಾಲಯ­ದಲ್ಲಿ ಸತತ 36 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 24 ಜನರು ಮೃತಪಟ್ಟಿದ್ದು, ಇನ್ನೂ 24 ಜನರು ಸಾವನ್ನಪ್ಪಿರುವ  ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾ­ಣವಾಗಿದ್ದು,  20 ಸಾವಿರಕ್ಕಿಂತ ಅಧಿಕ ಜನರನ್ನು ನಿರಾಶ್ರಿತ ಶಿಬಿರಕ್ಕೆ ಸ್ಥಳಾಂತ­ರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಗಾರೊ ಗುಡ್ಡಗಾಡು ಪ್ರದೇಶದ ಕನಿಷ್ಠ ಮೂರು ಜಿಲ್ಲೆಗಳನ್ನು ಹೆಚ್ಚು ಹಾನಿಗೊ­ಳಗಾದ ಪ್ರದೇಶ ಎಂದು ಘೋಷಿಸಲಾಗಿದೆ. ಪಶ್ಚಿಮ ಗಾರೊ ಗುಡ್ಡಗಾಡು ಪ್ರದೇಶದಲ್ಲಿ ಮಂಗಳವಾರ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT