ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೇಶ ಪರೀಕ್ಷೆ ಅಕ್ರಮ: ಬಂಧನ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ವಿಜಯ­ವಾಡ ಮೂಲದ ಡಾ. ಎನ್‌ಟಿಆರ್‌ ಆರೋಗ್ಯ ವಿಜ್ಞಾನಗಳ ವಿಶ್ವವಿ­ದ್ಯಾಲಯ ಸಂಘಟಿಸಿದ ಸ್ನಾತ­ಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆ­ಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂ­ಧಿಸಿದಂತೆ ಮೂವರು ಪ್ರಮುಖ ಆರೋಪಿ­ಗಳು ಸೇರಿದಂತೆ ಒಂಬತ್ತು ಮಂದಿ­ಯನ್ನು ಶನಿವಾರ ಬಂಧಿ­ಸಲಾ­ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮದ ಹಿಂದಿನ ಪ್ರಮುಖ ಸಂಚು­ಕೋರ ಎ. ಶ್ರೀಕಾಂತ, ದಾವಣ­ಗೆರೆಯ ಅಮೀರ್‌ ಅಹಮ್ಮದ್‌ ಮತ್ತು ಡಾ. ಅವಿನಾಶ್‌ ಅವರನ್ನು ಆಂಧ್ರಪ್ರದೇಶದ ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

16 ದಲ್ಲಾಳಿಗಳು, ಒಬ್ಬ ವೈದ್ಯ, ಇಬ್ಬರು ಸಹಾಯಕರು ಮತ್ತು 27 ವಿದ್ಯಾರ್ಥಿಗಳು ಈ ಅಕ್ರಮದಲ್ಲಿ ಭಾಗಿ­ಯಾಗಿದ್ದಾರೆ ಎನ್ನುವುದು ಇಲ್ಲಿಯ ವರೆಗೆ ನಡೆದಿರುವ ತನಿಖೆಯಿಂದ ತಿಳಿದು ಬಂದಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಸಿಐಡಿ) ಟಿ. ಕೃಷ್ಣ ಪ್ರಸಾದ್‌ ಸುದ್ದಿಗಾರರಿಗೆ ತಿಳಿಸಿದರು.

ಮಣಿಪಾಲ ಮುದ್ರಣಾಲಯದ ಆಡ­ಳಿತ ಮಂಡಳಿ ಸದಸ್ಯರು ಮತ್ತು ಎನ್‌ಟಿಆರ್‌ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿ­ಯಾಗಿದ್ದು, ತನಿಖೆ ಮುಂದುವ­ರಿದಿದೆ ಎಂದು ಪ್ರಸಾದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT