ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್‌ ವಿರುದ್ಧ ದಾವೆ

ಕೋರ್ಟ್‌ ಮುಂದೆ ಸುಳ್ಳು ಹೇಳಿಕೆ
Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಉದ್ಯಮಿ ಮೊಯಿನ್‌ ಖಾನ್‌ ಖುರೇಷಿ ಮತ್ತು ನನ್ನ ನಡುವೆ ಯಾವುದೇ ಸಂಭಾ ಷಣೆ ನಡೆದಿಲ್ಲ. ಈ ಬಗ್ಗೆ ನ್ಯಾಯಾ ಲಯದ ಮುಂದೆ ಸುಳ್ಳು ಹೇಳಿಕೆ ನೀಡಿರುವ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧ ದಾವೆ ಹೂಡುವೆ’  ಎಂದು ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ  ಅವರು ಹೇಳಿದ್ದಾರೆ.

ಪ್ರಶಾಂತ್‌ ಭೂಷಣ್‌ ಅವರ ಹೇಳಿಕೆ ನಿರಾಧಾರ. ಆದ್ದರಿಂದ ಅವರ ವಿರುದ್ಧ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ ನಲ್ಲಿ ದಾವೆ ಹೂಡುವೆ.ಇದು ನನಗೆ ಸಂಬಂಧಿಸಿದಷ್ಟೆ ಅಲ್ಲ. ಸಿಬಿಐ ನಿರ್ದೇಶಕ ಹುದ್ದೆಯ ಘನತೆಯ ಪ್ರಶ್ನೆ. ಸಂಸ್ಥೆಗಿಂತ ನಾನೇನು ದೊಡ್ಡವನಲ್ಲ’ ಎಂದರು.
ಕಲ್ಲಿದ್ದಲು ಹಂಚಿಕೆ ಹಗರಣ ಪ್ರಕರಣದಲ್ಲಿ ಖರೇಷಿ ಅವರೊಂದಿಗೆ ಸಿಬಿಐ ನಿರ್ದೇಶಕರೊಂದಿಗೆ ವಿಷಯ ಗಳನ್ನು ಹಂಚಿಕೊಂಡಿರುವ ಸಾಧ್ಯತೆ ಇದೆ ಎಂದು ಭೂಷಣ್‌ ಮಾಡಿರುವ ಆಪಾದನೆ ಬಾಲಿಶವಾದುದು ಎಂದು ಟೀಕಿಸಿದರು.

ಸಿನ್ಹಾ ಅವರು 15 ತಿಂಗಳಲ್ಲಿ ಖರೇಷಿ ಅವರೊಂದಿಗೆ 90 ಬಾರಿ ಸಭೆ ನಡೆಸಿದ್ದಾರೆ. ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಖುರೇಷಿ ಅವರು  ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿರುವ ಭೂಷಣ್‌ ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.

ಸಿಬಿಐ ಮುಖ್ಯಸ್ಥರೊಂದಿಗೆ ಖುರೇಷಿ ಅವರು ಹೊಂದಿರುವ ನಂಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ (ತನಿಖೆ) ಮಹಾನಿರ್ದೇಶಕರು ಸಿದ್ಧಪಡಿಸಿರುವ ವರದಿಯನ್ನು ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಸಿನ್ಹಾ ಮತ್ತು ಖರೇಷಿ ಅವರು ನೇರವಾಗಿ ಸಂಬಂಧ ಹೊಂದಿರುವ ಬಗ್ಗೆ ಅದರಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಬಹುಶಃ  ಸಿನ್ಹಾ ಅವರ ಬಗ್ಗೆ ವ್ಯಂಗ್ಯವಾಗಿ ಪ್ರಸ್ತಾಪ ಮಾಡಿರಬಹುದು ಎಂದು ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT