ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಾರ್ಥಕ ವಾಕ್ಯ ಪ್ರಯೋಗ

Last Updated 30 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಪಾಠ–10: ಅನಿಶ್ಚಿತ ವರ್ತಮಾನ ಕಾಲದಲ್ಲಿರುವ ಸಕಾರಾತ್ಮಕ ವಾಕ್ಯಗಳನ್ನು ಪ್ರಶ್ನಾರ್ಥಕ ಕ್ರಿಯಾವಿಶೇಷಣಗಳನ್ನು ಉಪಯೋಗಿಸಿಕೊಂಡು ಪ್ರಶ್ನಾರ್ಥಕ ವಾಕ್ಯಗಳನ್ನಾಗಿ ರೂಪಿಸುವುದು.

ಪ್ರಶ್ನಾರ್ಥಕ ಕ್ರಿಯಾವಿಶೇಷಣಗಳು(IInterrogative Adverbs)bs
Why-  ಏಕೆ / ಯಾಕೆ
When -  ಯಾವಾಗ
Where -  ಎಲ್ಲಿ /ಎಲ್ಲಿಗೆ
How    -  ಹೇಗೆ/ಎಷ್ಟು /ಎಷ್ಟರಮಟ್ಟಿಗೆ

ನಿಯಮ-9: ವಾಕ್ಯದಲ್ಲಿರುವ ಕರ್ತೃವು ಪ್ರಥಮಪುರುಷ ಏಕವಚನ/ಅಥವಾ ಬಹುವಚನ ದ್ವಿತೀಯ ಪುರುಷ ಏಕವಚನ ಅಥವಾ ಬಹುವಚನ ತೃತೀಯ ಪುರುಷ ಬಹುವಚನ ಅಥವಾ ಯಾವುದೇ ನಾಮಪದ ಬಹುವಚನದ ರೂಪದಲ್ಲಿದ್ದಾಗ ಪ್ರಶ್ನಾರ್ಥಕ ಕ್ರಿಯಾವಿಶೇಷಣವನ್ನು ವಾಕ್ಯದ ಪ್ರಾರಂಭದಲ್ಲಿ ಇಟ್ಟು, ನಂತರ  Do ಎಂಬ ಸಹಾಯಕ ಕ್ರಿಯಾಪದವನ್ನು ಹಾಕಿ ನಂತರ ಕರ್ತೃವಿನ ಮುಂದೆ ಕ್ರಿಯಾಪದದ ಮೂಲರೂಪವನ್ನು ಇಡಬೇಕು.

ಉದಾಹರಣೆಗಳಿಗೆ ಟೇಬಲ್‌ಅನ್ನು ನೋಡಿ
ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ. ಇಲ್ಲಿ ತೋರಿಸಲಾಗಿರುವ ವಾಕ್ಯಗಳಲ್ಲಿ How ಎಂಬ ಪ್ರಶ್ನಾರ್ಥಕ ಕ್ರಿಯಾ ವಿಶೇಷಣವನ್ನು ಉಪಯೋಗಿಸಲಾಗಿದೆ. ಆದರೆ ಈ ಪ್ರಶ್ನಾರ್ಥಕ ವಿಶೇಷಣವನ್ನು ಉಪಯೋಗಿಸಿ ರಚಿಸಲಾದ ವಾಕ್ಯಗಳಿಗೆ ಸಂಬಂಧಪಟ್ಟ ವ್ಯಾಕರಣ ನಿಯಮಗಳನ್ನು ಮುಂಬರುವ ಪಾಠಗಳಲ್ಲಿ ಕಲಿಯುವಿರಿ.

How many boys are in your college?  - ನಿಮ್ಮ ಕಾಲೇಜಿನಲ್ಲಿ ಎಷ್ಟು ಹುಡುಗರು ಇರುತ್ತಾರೆ/ಇದ್ದಾರೆ?
How much do you eat?  - ನೀನು ಎಷ್ಟು ತಿನ್ನುತ್ತೀಯಾ?
How sweet is this fruit?             
ಈ ಹಣ್ಣು ಎಷ್ಟು ಸಿಹಿಯಾಗಿದೆ?
ಕಲಿಯುವ ಪದಗಳು-9
ಹೊಡೆ/Beat, ಸುಡು/Burn, ಕಟ್ಟು/ Build, ಕೊಂಡುಕೊಳ್ಳು/ Buy, ತೋಡು/ಅಗೆ/Dig, ತೆವಳು/Creep,ಉಣಿಸು/Feed, ಹಿಡಿ/  Hold, ಇಡು/Keep, ಮುಚ್ಚು/Close.

ಅಭ್ಯಾಸ-10: ಭಾಷಾಂತರ ಪಾಠ -19 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ.
ಸಕಾರಾತ್ಮಕ ವಾಕ್ಯಗಳು: ನಾನು ಹೊಡೆಯುತ್ತೇನೆ, ನಾವು ಸುಡುತ್ತೇವೆ, ನೀನು ಕಟ್ಟುತ್ತೀಯ, ನೀವು ಕೊಂಡುಕೊಳ್ಳುತ್ತೀರಿ, ಅವು ತೋಡುತ್ತವೆ. ಪ್ರಶ್ನಾರ್ಥಕ ಕ್ರಿಯಾವಿಶೇಷಣವಿರುವ ಸಕಾರಾತ್ಮಕ ವಾಕ್ಯಗಳು: ನಾನು ಏಕೆ ಹೊಡೆಯುತ್ತೇನೆ?, ನಾವು ಯಾವಾಗ ಸುಡುತ್ತೇನೆ?, ನೀನು ಎಲ್ಲಿ ಕಟ್ಟುತ್ತೀಯ?, ನೀವು ಯಾಕೆ ಕೊಂಡುಕೊಳ್ಳುತ್ತಿರಿ?, ಅವು ಹೇಗೆ ತೋಡುತ್ತವೆ?.

ಭಾಷಾಂತರ ಪಾಠ - 20 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ.
ಸಕಾರಾತ್ಮಕ ವಾಕ್ಯಗಳು:
I laugh, We spread, You let, You read, They bring.
ಪ್ರಶ್ನಾರ್ಥಕ ಕ್ರಿಯಾ ವಿಶೇಷಣವಿರುವ ಸಕಾರಾತ್ಮಕ ಪ್ರಶ್ನಾರ್ಥಕವಾಕ್ಯಗಳು:Why do I laugh?, When do we spread?, How do you let?, Why do you read?, How do they bring?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT