ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕಾಗೆ ಕಾಂಗ್ರೆಸ್‌ ಕಾರ್ಯಕರ್ತರ ಮೊರೆ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷ ಹೀನಾಯ ಸೋಲು ಕಂಡಿರುವ ಕಾರಣ ರಾಜಧಾನಿ­ಯಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಚೇರಿ­ಯಲ್ಲಿ ಭಾನುವಾರ ನೀರವ ಮೌನ ಆವರಿಸಿತ್ತು.
‘ಪಕ್ಷದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ದೊಡ್ಡ  ಜವಾಬ್ದಾರಿ ಕೊಡ­ಬೇಕು’ ಎಂದು ಅಲ್ಲಿ ಸೇರಿದ್ದ ಸುಮಾರು 100 ಕಾರ್ಯ­ಕರ್ತರಿದ್ದ ಗುಂಪೊಂದು ಆಗ್ರಹಿಸಿತು.

ಆದರೆ, ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಲು ಪ್ರಧಾನ ಕಚೇರಿ­ಯಲ್ಲಿ ಯಾವೊಬ್ಬ ಮುಖಂಡರೂ  ಇರಲಿಲ್ಲ. ವಕ್ತಾರ ಅಜಯ್‌ ಮಾಕನ್‌ ಭಾನುವಾರ ಬೆಳಿಗ್ಗೆ ಕಚೇರಿಗೆ ಬಂದಿ­ದ್ದರು. ಆದರೆ ಪಕ್ಷಕ್ಕೆ ಸೋಲು ಖಚಿತ­ವಾ­ಗಿದ್ದೇ ತಡ ಅಲ್ಲಿಂದ ನಿರ್ಗಮಿಸಿದರು.

ಘೋಷಣೆ: ಅಕ್ಬರ್‌ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿ ಮುಂದೆ ಸೇರಿದ್ದ ಸುಮಾರು ೧೦೦ ಕಾರ್ಯಕರ್ತರು ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ಪ್ರಮುಖ ಹೊಣೆ ಕೊಡುವಂತೆ ಆಗ್ರಹಿಸಿ­ದರು. ಕಾರ್ಯಕರ್ತರಲ್ಲಿ ಮಹಿಳೆ­ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
‘ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ಉಳಿಸಿ’ (ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ ಬಚಾವೊ), ‘ಪ್ರಿಯಾಂಕಾ ಅವರನ್ನು ಕರೆತಂದು ದೇಶವನ್ನು ಉಳಿಸಿ’ ( ಪ್ರಿಯಾಂಕಾ ಲಾವೊ ದೇಶ್‌ ಬಚಾವೊ) ಎಂಬ ಘೋಷಣೆಯ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದರು.

‘ಕಾರ್ಯಕರ್ತರು ಹಾಗೂ ನಾಯ­ಕತ್ವದ ನಡುವೆ ಸರಿಯಾದ ಸಂಪರ್ಕವೇ ಇಲ್ಲ. ಸೋಲಿಗೆ ಇದೇ ಕಾರಣವಾ­ಯಿತು’ ಎಂದು ಸ್ಥಳೀಯ ಕಾರ್ಯಕರ್ತ ಜಗದೀಶ್‌ ಶರ್ಮಾ ಹೇಳಿದರು.
‘ಪಕ್ಷವನ್ನು ಮತ್ತೆ ಕಟ್ಟುವುದಕ್ಕೆ ಪ್ರಿಯಾಂಕಾ ಅವರು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ನೆರವು ನೀಡಬೇಕು’ ಎಂದೂ  ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT