ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಜಿಂಟಾ ಹೇಳಿಕೆ ದಾಖಲು

Last Updated 24 ಜೂನ್ 2014, 20:41 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಮಾಜಿ ಆಪ್ತ ಗೆಳೆಯ ನೆಸ್‌ ವಾಡಿಯಾ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ, ಮುಂಬೈ ಪೊಲೀಸ­ರಿಗೆ ಮಂಗಳ­ವಾರ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಮುಂಬೈನ ವಾಂಖೆಡೆ ಕ್ರೀಡಾಂ­ಗ­ಣಕ್ಕೆ ತಮ್ಮ ವಕೀಲರೊಂ­ದಿಗೆ ಭಾರಿ ಭದ್ರತೆ­ಯೊಂ­ದಿಗೆ ಬಂದ ಜಿಂಟಾ  ಹೇಳಿಕೆ  ನೀಡಿ­ದರು. ಭೂಗತಪಾತಕಿ ರವಿ ಪೂಜಾರಿ­­­ಯಿಂದ ಬೆದರಿಕೆ ಸಂದೇಶ ಬಂದಿರು­ವು­ದಾಗಿ ವಾಡಿಯಾ ಸಮೂಹ ದೂರು ನೀಡಿತ್ತು. ಈ ಪ್ರಕರಣ­ದಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಅವಧಿ ಮರೀನ್  ಡ್ರೈವ್‌ ಪೊಲೀ­ಸರು ಹೇಳಿಕೆ ದಾಖಲಿಸಿಕೊಂಡರು.  

ವಾಂಖೆಡೆ ಕ್ರೀಡಾಂಗಣದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ಐಪಿ­ಎಲ್‌ ಪಂದ್ಯ ನಡೆಯುತ್ತಿದ್ದಾಗ ನೆಸ್‌­ವಾಡಿಯಾ  ತಮ್ಮೊಂ­ದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಪೊಲೀಸರಿಗೆ ಜಿಂಟಾ ವಿವರಿಸಿದರು. ಘಟನೆ ವೇಳೆ ಯಾರ್ಯಾರು ಇದ್ದರು ಎಂಬುದನ್ನು  ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT