ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ ಜಾಥಾ

Last Updated 22 ಡಿಸೆಂಬರ್ 2014, 7:06 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಪ್ಲಾಸ್ಟಿಕ್ ಬಳಕೆಯಿಂದ ಜನರಲ್ಲಿ ಹಲವು  ರೋಗಗಳು ಕಾಣಿಸಿ­ಕೊಳ್ಳುತ್ತಿದ್ದು, ಇದನ್ನು ತಡೆ­ಯಲು ಸಮಾಜವನ್ನು ಪ್ಲಾಸ್ಟಿಕ್ ಮುಕ್ತವ­ನ್ನಾಗಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ.ನಾ­ಗೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಗಾಂಧಿ ಭವನದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶವನ್ನು ಪ್ಲಾಸ್ಟಿಕ್ ಮುಕ್ತ ಸಮಾ­ಜವಾಗಿ ನಿರ್ಮಾಣ ಮಾಡು­ವುದು ಎಲ್ಲರ ಕರ್ತವ್ಯ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎಂ. ಶಿವಮಾದು ಮಾತನಾಡಿ, ನಮ್ಮ ದೇಶವನ್ನು ಪ್ಲಾಸ್ಟಿಕ್ ಮತ್ತು ಕಸದ ಪಿಡುಗುಗಳು ನಿರಂತರ ಕಾಡುತ್ತಿವೆ. ಇವು­ಗಳಿಂದಾಗುವ ಅನಾಹುತವನ್ನು ಮನ­ಗಂಡು ಈಗಲೇ ನಿವಾರಿಸಿಕೊಳ್ಳ­ಬೇಕು ಎಂದರು.

ಜಾಗೃತಿ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಅನಾ­ಹುತಗಳ ಬಗ್ಗೆ ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ಸಿಂ.ಲಿಂ.ನಾಗ­ರಾಜು, ರವಿಕುಮಾರ್‌­ಗೌಡ ಎಚ್.ಕೃಷ್ಣೇ­­ಗೌಡ, ರಾಧಿಕಾ, ಲಕ್ಷ್ಮೀಪತಿ, ವಿಜಯ್ ರಾಂಪುರ, ಶ್ರೀನಿವಾಸ ರಾಂಪುರ, ಚೌ.ಪು.­ಸ್ವಾಮಿ, ಡಿ.ರಾಜ­ಶೇಖರ್, ಪುಟ್ಟಸ್ವಾಮಿಗೌಡ, ಮಂಜೇಶ್‌­ಬಾಬು, ಶಂಕರ್‌ಬಾಬು,  ಚಲುವ­ರಾಜು, ಸಿ.ರಾಜಶೇಖರ್  ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT