ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ಲಾಸ್ಟಿಕ್  ನಿಷೇಧ ಮಾಡದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ (ಪ್ರ.ವಾ.­ನ.೧೯) ಬೀಸಿದ ಸುದ್ದಿಗೆ ಪ್ರತಿಕ್ರಿಯೆ. ದೇಶದಲ್ಲಿ   ಪ್ಲಾಸ್ಟಿಕ್  ಬಳಕೆ ಪೆಡಂಭೂತದಂತೆ ಬೆಳೆದು ಪರಿ­ಸರ ಮಾಲಿನ್ಯ ಸೃಷ್ಟಿ ಆಗಿರುವುದಕ್ಕೆ   ಪ್ಲಾಸ್ಟಿಕ್ ಬಳಕೆಯೇ ಮುಖ್ಯ ಕಾರಣ. ನಗರ, ಪಟ್ಟಣ, ಹಳ್ಳಿ­ಗಳಲ್ಲಿಯೂ   ಪ್ಲಾಸ್ಟಿಕ್  ತ್ಯಾಜ್ಯ ವಸ್ತುಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರು­ವುದು ಸಾಮಾನ್ಯ ದೃಶ್ಯವಾಗಿದೆ.

ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅತ್ಯಗತ್ಯ­. ಅದರಲ್ಲೂ ನಿತ್ಯ ಬಳಕೆ­ಯಾಗು­ತ್ತಿರುವ   ಪ್ಲಾಸ್ಟಿಕ್  ಕೈಚೀಲ, ಲೋಟ, ಟೇಬಲ್ ಹಾಸು, ಅರ್ಧ ಲೀಟರ್ ನೀರಿನ ಬಾಟ­ಲುಗಳು ಸಭೆ-, ಸಮಾರಂಭಗಳಲ್ಲಿ ಹೆಚ್ಚೆಚ್ಚು ಬಳಕೆ­ಯಾಗಿ,   ಪ್ಲಾಸ್ಟಿಕ್  ಕಸ ಬೆಳೆ­ಯುತ್ತಿದೆ. ರಾಜ್ಯ ಸರ್ಕಾರ  ಪ್ಲಾಸ್ಟಿಕ್  ಕೈಚೀಲ, ಲೋಟ, ಟೇಬಲ್ ಹಾಸು ಈ   ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಕೆ ಮತ್ತು ಮಾರಾಟ ನಿಷೇಧಿಸು­ವು­ದರ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಲಿ.
   –ಪ್ರೊ.ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT