ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆಗೆ ಪರ್ಯಾಯ ಚಿಕಿತ್ಸೆ

ಅಂಕುರ– 72
Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ಫಲವಂತಿಕೆಯಲ್ಲಿ ಅಕ್ಯುಪಂಕ್ಚರ್‌ ಪರಿಣಾಮಕಾರಿಯಾಗಿದೆಯೇ? ಹೌದು. ಯಾವುದೇ ಉಪಪರಿಣಾಮಗಳಿಲ್ಲದೇ ಫಲವಂತಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಸಂಯುಕ್ತ ಚಿಕಿತ್ಸೆಯಾಗಿ ಇದನ್ನು ಬಳಸಬಹುದಾಗಿದೆ. ಎಂದರೆ ಅತ್ಯಾಧುನಿಕ ಚಿಕತ್ಸೆಗಳೊಂದಿಗೆ ಅಕ್ಯುಪಂಕ್ಚರ್‌ ಅನ್ನೂ ಸಹ ಅನುಸರಿಸಿದ್ದಲ್ಲಿ ಸಹಜವಾಗಿಯೇ ಗರ್ಭಧಾರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಚೀನಾದ ಪಾರಂಪರಿಕ ಚಿಕಿತ್ಸಾವಿಧಾನವಾಗಿದೆ ಅಕ್ಯುಪಂಕ್ಚರ್‌. ಈಚೆಗೆ ಅಧ್ಯಯನ ಕೈಗೊಂಡಿರುವ ಟೆಲ್‌ ಅವಿವ್‌ ವಿಶ್ವವಿದ್ಯಾಲಯವು ಈ ಮಾತಿಗೆ ಪುರಾವೆ ಒದಗಿಸಿದೆ. ಶೇ 26ರಷ್ಟು ಫಲವಂತಿಕೆಯ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದು ಹೇಳಿದೆ.

ಒಂದು ಸಮೂಹದ ಜನರನ್ನು ಸಂಯುಕ್ತ ಚಿಕಿತ್ಸೆಗೆ ಒಳಪಡಿಸಿದಾಗ ಆ ಗುಂಪಿನಲ್ಲಿದ್ದ ಶೇ 65.5ರಷ್ಟು ಜನರು ಗರ್ಭಧರಿಸಿದ್ದರು. ಉಳಿದ ಜನರಿಗೆ ಯಾವುದೇ ಸಾಂಪ್ರದಾಯಿಕ ಅಥವಾ ಹರ್ಬಲ್‌ ಚಿಕಿತ್ಸೆಗಳನ್ನು ನೀಡಿರಲಿಲ್ಲ.

ಪ್ರತಿವರ್ಷ 4.5ದಶಲಕ್ಷ ಜನರು ಬಂಜೆತನದಿಂದ ಬಳಲುತ್ತಿದ್ದಾರೆ. ಅಕ್ಯುಪಂಕ್ಚರ್‌ ಇಂಥವರಿಗೆ ಪರಿಹಾರೋಪಾಯವಾಗಬಹುದು. ಅಕ್ಯುಪಂಕ್ಚರ್‌ನಿಂದಾಗಿ ಸರಾಗವಾದ ಗರ್ಭಧಾರಣೆ ಮತ್ತು ಬಸಿರಿನ ಕಾಲಾವಧಿಯಲ್ಲಿ ಉತ್ತಮ ಆರೋಗ್ಯ ಕಾಯ್ದಿಡಲು ಅನುಕೂಲವಾಗುತ್ತದೆ. ಐವಿಎಫ್‌ ತಂತ್ರಜ್ಞಾನದ ಮೂಲಕ ಗರ್ಭಕಟ್ಟಿದಾಗ ಆ ಬಸಿರನ್ನು ಅವಧಿ ಪೂರ್ಣಗೊಳಿಸುವವರೆಗೂ ಸುರಕ್ಷಿತವಾಗಿರಿಸುವುದೂ ಅಷ್ಟೇ ಮಹತ್ವಪೂರ್ಣವಾಗಿರುತ್ತದೆ.

ಅಕ್ಯುಪಂಕ್ಚರ್‌ ವಿಧಾನವನ್ನು ಅನುಸರಿಸುವುದರಿಂದ ಹಲವಾರು ಜನರು ಸುರಕ್ಷಿತ ಗರ್ಭಾವಧಿಯನ್ನು ಪೂರೈಸಿರುವ ಉದಾಹರಣೆಗಳಿವೆ. ಐವಿಎಫ್‌ ತಂತ್ರಜ್ಞಾನವಿಲ್ಲದೇ ಗರ್ಭಕಟ್ಟಿರುವ ನಿದರ್ಶನಗಳೂ ಇವೆ.

ಅಕ್ಯುಪಂಕ್ಚರ್‌ನಿಂದಾಗಿ ಒತ್ತಡ ಕಡಿಮೆಯಾಗುತ್ತದೆ. ರಕ್ತಸಂಚಾರ ಸರಾಗವಾಗುತ್ತದೆ. ಇವೆರಡೂ ಬಂಜೆತನ ನಿವಾರಣೆಗೆ ಅತಿಮುಖ್ಯ ಅಂಶವಾಗಿದೆ. ಇದರಿಂದ ಸಂತಾನೋತ್ಪತ್ತಿಯ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆಗುತ್ತದೆ. ಸಂತಾನೋತ್ಪತ್ತಿಯ ಹಾರ್ಮೋನುಗಳ ಕಾರ್ಯನಿರ್ವಹಣೆಯು ಸೂಕ್ತವಾಗಿ ಆಗುತ್ತದೆ.

ಹಲವಾರು ಅಧ್ಯಯನಗಳು ಮತ್ತು ವರದಿಗಳು ಸ್ಪಷ್ಟ ಪಡಿಸುವುದೇನೆಂದರೆ ಚೀನಾದ ಪಾರಂಪರಿಕ ಚಿಕಿತ್ಸಾ ವಿಧಾನವಾಗಿರುವ ಅಕ್ಯುಪಂಕ್ಚರ್‌ ಕೇವಲ ಗರ್ಭಧಾರಣೆಗೆ ಮಾತ್ರ ಸಹಾಯಕವಾಗಿಲ್ಲ. ಸುರಕ್ಷಿತ ಗರ್ಭಧಾರಣೆಯ ಪೂರ್ಣ ಅವಧಿ, ಸುರಕ್ಷಿತ ಹೆರಿಗೆ ಹಾಗೂ ತಾಯ್ತನವನ್ನೂ ನೀಡುವುದಾಗಿದೆ ಎಂದು ಡಾ. ಅಶ್ವಿನಿ ಎನ್‌ ಅಭಿಪ್ರಾಯ ಪಡುತ್ತಾರೆ. (ಅವರು ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಮಣಿಪಾಲ್‌ ಅಂಕುರ ಆ್ಯಂಡ್ರೊಲಜಿ ಮತ್ತು ರಿಪ್ರೊಡಕ್ಟಿವ್‌ ಸರ್ವಿಸ್‌ ಕೇಂದ್ರದಲ್ಲಿ ಯೋಗ, ಡಯಟ್‌ ಹಾಗೂ ಅಕ್ಯುಪಂಕ್ಚರ್‌ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.)

ಅಕ್ಯುಪಂಕ್ಚರ್‌ನ ಇನ್ನಿತರ ಲಾಭಗಳೂ ಇವೆ. ದೇಹದಲ್ಲಿ ರಕ್ತ ಸರಬರಾಜು ಸರಾಗವಾಗಿ ಆಗುತ್ತದೆ. ಗರ್ಭಕೋಶಕ್ಕೆ ಹಾಗೂ ಅಂಡಾಶಯಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯಾಗುವುದರಿಂದ ಆರೋಗ್ಯವಂತ ಅಂಡಾಣುವಿನ ಬಿಡುಗಡೆ ಮತ್ತು ಗರ್ಭಕಸಿ ಸಾಧ್ಯವಾಗುತ್ತದೆ. ಪೂರ್ಣಾವಧಿಯ ಬಸಿರಿಗೆ ಇದು ಪೂರಕವಾದ ಸನ್ನಿವೇಶವನ್ನು ಸ್ಥಾಪಿಸುತ್ತದೆ.

ಅಕ್ಯುಪಂಕ್ಚರ್‌ ಎಂದರೆ ದೇಹದ ಮೇಲ್ಮೈನಲ್ಲಿ ಒಂದಷ್ಟು ಬಿಂದುಗಳನ್ನು ಗುರುತಿಸಿ ಅವಕ್ಕೆ ಉತ್ತೇಜನ ನೀಡುವಂತೆ ಸೂಜಿಗಳನ್ನು ಚುಚ್ಚಲಾಗುತ್ತದೆ. ಇದು ನೋವು ರಹಿತವಾಗಿರುತ್ತದೆ.

ಮಾನವ ದೇಹದ ಮೇಲೆ ಇಂಥ 2000 ಅಕ್ಯುಪಂಕ್ಚರ್‌ನ ಸಂವೇದನಾ ಬಿಂದುಗಳಿವೆ. ಇವು ದೇಹದ 14 ಮಾರ್ಗಗಳನ್ನು ಸಂಪರ್ಕಿಸುತ್ತವೆ. ಇವಕ್ಕೆ ಚೀನೀ ವೈದ್ಯಕೀಯ ವಿಧಾನದಲ್ಲಿ ಮೆರಿಡಿಯನ್‌ ಮಾರ್ಗವೆಂದು ಕರೆಯಲಾಗುತ್ತದೆ. ಈ ಮೆರಿಡಿಯನ್‌ ಮಾರ್ಗದ ಮುಖಾಂತರ ಶಕ್ತಿ ಕೇಂದ್ರಗಳನ್ನು ಉದ್ದೀಪಿಸಲಾಗುತ್ತದೆ. ಇದಕ್ಕೆ  ‘ಖಿ’ ಎಂದು ಕರೆಯಲಾಗುತ್ತದೆ.  ದೇಹದ ಮೇಲ್ಮೈ ಭಾಗದಿಂದ ದೇಹದೊಳಗಿನ ಅವಯವಗಳು, ಅಂಗಾಂಶಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂಬುದು ಚೀನೀ ವೈದ್ಯಕೀಯ ಪದ್ಧತಿಯ ನಂಬಿಕೆಯಾಗಿದೆ.

‘ಖಿ’ ಮೂಲಕ ನಮ್ಮ ದೈಹಿಕ, ಭಾವುಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತಂತುಗನ್ನು ಉದ್ದೀಪಿಸುತ್ತದೆ. ಇವೆಲ್ಲವುಗಳ ನಡುವೆ ಸಮತೋಲನವನ್ನೂ ಕಾಪಾಡುತ್ತದೆ. ಈ ‘ಖಿ’ ಮಾರ್ಗದ ಮಧ್ಯದಲ್ಲಿ ಅಡೆತಡೆಗಳುಂಟಾದಾಗ ನಮ್ಮಲ್ಲಿ ದೈಹಿಕ ಬಾಧೆಗಳು, ಕಾಯಿಲೆಗಳು, ನೋವು ಮುಂತಾದವು ಕಾಣಿಸಿಕೊಳ್ಳುತ್ತವೆ.  ಅಕ್ಯುಪಂಕ್ಚರ್‌ ವಿಧಾನದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಸರಳಗೊಳಿಸುವುದಾಗಿದೆ. ಅಡೆತಡೆ ಉಂಟಾದ ಕಡೆ ಅಕ್ಯುಪಂಕ್ಚರ್‌ ತಜ್ಞರು ಸೂಜಿಗಳಿಂದ ಆ ಕೇಂದ್ರಗಳನ್ನು ಉದ್ದೀಪನಗೊಳಿಸುತ್ತಾರೆ. ಮತ್ತೆ ಸಕಾರಾತ್ಮಕ ಶಕ್ತಿಯ ಹರಿವು ಸಲೀಸಾಗುತ್ತದೆ.

ಈ ವಿಧಾನದಿಂದಾಗಿ ದಂಪತಿಯ ಯಾವುದೇ ಸಮಸ್ಯೆಗಳಿಗೂ ಪೂರಕವಾದ ಸಹಾಯವಂತೂ ದೊರೆಯುವುದು ಖಚಿತವಾಗಿದೆ. ಫಲವಂತಿಕೆಯ ಸಾಧ್ಯತೆಗಳು ಹೆಚ್ಚಾಗುವುದೂ ಇದೇ ಕಾರಣದಿಂದಾಗಿದೆ. ಮಹಿಳೆಯರು ಅಕ್ಯುಪಂಕ್ಚರ್‌ ಚಿಕಿತ್ಸೆಗೆ ಒಳಗಾದಲ್ಲಿ ಅವರ ಅಂಡಾಶಯ, ಅಂಡನಾಳ, ಋತುಚಕ್ರದ ಏರುಪೇರು ಮುಂತಾದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎನ್ನುವುದು ಡಾ. ಕ್ಷಮಾ ಅಭಿಪ್ರಾಯವಾಗಿದೆ. (ಇವರು ಬೆಂಗಳೂರಿನ ಜೆಪಿ ನಗರದಲ್ಲಿರುವ ಮಣಿಪಾಲ್‌ ಅಂಕುರ ಆ್ಯಂಡ್ರೊಲಜಿ ಮತ್ತು ರಿಪ್ರೊಡಕ್ಟಿವ್‌ ಸರ್ವಿಸ್‌ ಕೇಂದ್ರದಲ್ಲಿ ಯೋಗ, ಡಯಟ್‌ ಹಾಗೂ ಅಕ್ಯುಪಂಕ್ಚರ್‌ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ)

ಮಾಹಿತಿಗೆ ಸಂಪರ್ಕಿಸಿ: 18002084444 
info@manipalankur.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT